fbpx
ಸಮಾಚಾರ

ಪಂದ್ಯಕ್ಕೂ ಮುನ್ನ ಅಬುಧಾಬಿ ಕ್ರೀಡಾಂಗಣದ ಭಾರತ ಮೂಲದ ಪಿಚ್‌ ಕ್ಯೂರೇಟರ್‌ ನಿಗೂಢ ಸಾವು

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಅಬುದಾಬಿ ಕ್ರಿಕೆಟ್ ಸ್ಟೇಡಿಯಂ ನ ಪಿಚ್ ಕ್ಯುರೇಟರ್ ಸಾವನ್ನಪ್ಪಿದ್ದಾರೆ. ಭಾರತದ ಉತ್ತರಾಖಂಡ್‌ ಮೂಲದ ಮೋಹನ್ ಸಿಂಗ್ ಅವರು ಭಾನುವಾರ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್‌ ಪಂದ್ಯ ನಡೆಯವ ಕೆಲ ಗಂಟೆಗಳು ಮೊದಲು ತಮ್ಮ ಕೊಠಡಿಯ ಫ್ತಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆದರೆ, ಮೋಹನ್ ಸಿಂಗ್ ಅವರ ನಿಧನಕ್ಕೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನೂ ಮಾಧ್ಯಮಗಳಿಗೆ ಸಿಕ್ಕಿಲ್ಲ. ನಾಳೆ ಈ ಬಗ್ಗೆ ಯುಎಇ ಕ್ರಿಕೆಟ್ ಸಂಸ್ಥೆಯಿಂದ ಹೇಳಿಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ. ಯುಎಇ ಕ್ರಿಕೆಟ್‌ ಮೂಲಗಳ ಪ್ರಕಾರ ಮೋಹನ್‌ ಸಿಂಗ್‌ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದಾದ ಸಾಧ್ಯತೆ ಇದೆ.

“ಮೋಹನ್ ಸಿಂಗ್ ಇವತ್ತು ನಿಧನರಾಗಿರುವುದು ನಿಜ. ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾದ ಬಳಿಕ ಪೂರ್ಣ ವಿವರ ನೀಡಲಾಗುತ್ತದೆ. ಅವರು ಸಾವನ್ನಪ್ಪಿರುವುದು ಬಹಳ ದುರದೃಷ್ಟಕರ” ಎಂದು ಯುಎಇ ಕ್ರಿಕೆಟ್ ಸಂಸ್ಥೆಯ ಮೂಲವೊಂದು ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top