fbpx
ಸಮಾಚಾರ

ಪುನೀತ್ ಪುಣ್ಯ ಸ್ಮರಣೆ: ಅಪ್ಪುವಿಗೆ ಪಿಂಡ ಪ್ರದಾನ ಮಾಡಿದ ನಟ ವಿನೋದ್‌ ರಾಜ್‌

ದೊಡ್ಮನೆ ಕುಟುಂಬ ಪುನೀತ್ ಅವರ 11ನೇ ದಿನದ ಕಾರ್ಯಗಳನ್ನು ಮಾಡಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ಮನೆಯಲ್ಲೂ ಪೂಜೆಯನ್ನು ಮಾಡಿದೆ. ಈ ಮಧ್ಯೆ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ, ನಟ ವಿನೋದ್‌ರಾಜ್‌ ಪಟ್ಟಣದ ಗಂಜಾಂನ ಸಂಗಮ ಬಳಿ ನಟ ಪುನೀತ್‌ ರಾಜ್‌ಕುಮಾರ್‌ ಅವರ 11ನೇ ದಿನದ ಪುಣ್ಯತಿಥಿ ಅಂಗವಾಗಿ ಪಿಂಡ ಪ್ರದಾನ ಕಾರ್ಯ ನೆರವೇರಿಸಿದ್ದಾರೆ.

ಹೌದು, ವಿನೋದ್ ರಾಜ್ ಅವರು ತಮ್ಮ ತಾಯಿ ಲೀಲಾವತಿ ಹಾಗೂ ಕುಟುಂಬದ ಆಪ್ತವರ್ಗದವರ ಜೊತೆ ಶ್ರೀರಂಗಪಟ್ಟಣದ ಕಾವೇರಿ ತೀರ ಸಂಗಮದಲ್ಲಿ ಪುನೀತ್ ರಾಜ್ ಕುಮಾರ್ ಆತ್ಮಕ್ಕೆ ಶಾಂತಿ ಕೋರಿ ತರ್ಪಣ ಅರ್ಪಿಸಿ ವೈದಿಕ ಕ್ರಿಯಾ ಕರ್ಮದ ಪೂಜೆ ನೆರವೇರಿಸಿದ್ದಾರೆ.

ಎರಡು ಕಾರಿನಲ್ಲಿ ಸಂಗಮಕ್ಕೆ ಬಂದಿದ್ದ ಲೀಲಾವತಿ ಹಾಗೂ‌ ವಿನೋದ್ ರಾಜ್ ಸೇರಿ ಅವರ ಆಪ್ತ ಕುಟುಂಬ ವರ್ಗದವರು ಸಂಗಮದಲ್ಲಿ ಪುನೀತ್‌ ಆತ್ಮದ ಶಾಂತಿಗಾಗಿ ಅರ್ಚಕ ದೇವರಾಜ್ ಶರ್ಮಾರಿಂದ ಆಶ್ಲೇಷ ಬಲಿ, ನಾರಾಯಣ ಬಲಿ ಪೂಜೆ, ಹೋಮ ನಡೆಸಿದರು. ಬಳಿಕ ಕಾವೇರಿ ನದಿಯಲ್ಲಿ ತರ್ಪಣ ಅರ್ಪಿಸಿ ಪುನೀತ್ ಆತ್ಮಕ್ಕೆ ಶಾಂತಿಕೋರಿದ್ದಾರೆ ವಿನೋದ್‌ ರಾಜ್‌.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top