fbpx
ಸಮಾಚಾರ

IPL 2022: RCB ತಂಡದಲ್ಲಿ ಮಹತ್ವದ ಬದಲಾವಣೆ: RCBಗೆ ಹೊಸ ಕೋಚ್ ನೇಮಕ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ IPL 2022 ಟೂರ್ನಿಗೆ ತಯಾರಿ ಆರಂಭಿಸಿದೆ. ಮುಂದಿನ ತಿಂಗಳು ನಡೆಯಲಿರುವ ಆಟಗಾರರ ಹರಾಜಿಗೆ ಕಸರತ್ತು ಆರಂಭಿಸಿದೆ. RCB ತಂಡ ಭಾರಿ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಈಗಾಗಲೇ ತಂಡಕ್ಕೆ ನೂತನ ಪ್ರಧಾನ ಕೋಚ್ ಅನ್ನು ನೇಮಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ಆರ್‌ಸಿಬಿ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಮೈಕ್ ಹೆಸ್ಸನ್ ಅವರ ಸ್ಥಾನವನ್ನು ಸಂಜಯ್‌ ಬಂಗಾರ್ ತುಂಬಲಿದ್ದಾರೆ. ಹೆಸ್ಸನ್‌ ಅವರು ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಜೊತೆಗಿರಲಿದ್ದಾರೆ.

ಮುಂದಿನ ಎರಡು ಐಪಿಎಲ್ ಸೀಸನ್‌ಗಳಿಗೆ ಮುಖ್ಯ ಕೋಚ್ ಆಗಿ ಬಂಗರ್ ಅವರನ್ನು ಆರ್‌ ಸಿ ಬಿ ನೇಮಿಸಿದೆ. ಬಂಗಾರ್ ಅವರು ಕಳೆದ ಕೆಲವು ಸೀಜನ್‌ ಗಳಲ್ಲಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್‌ – 2021 ಮೊದಲ ಹಂತದಲ್ಲಿ ಆರ್‌ ಸಿ ಬಿ ಪ್ರಧಾನ ತರಬೇತುದಾರರಾಗಿದ್ದ ಸೈಮನ್‌ ಕಟಿಚ್‌ ಅವರು ವೈಯಕ್ತಿಕ ಕಾರಣದಿಂದ ಎರಡನೇ ಹಂತದಿಂದ ದೂರಸರಿದಿದ್ದರು. ಅವರ ಸ್ಥಾನಕ್ಕೆ ಮೈಕ್ ಹೆಸ್ಸನ್ ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಂಡಿದ್ದರು.

’ಈ ಸ್ಥಾನ ಲಭಿಸಿರುವು ದೊಡ್ಡ ಗೌರವ ಮತ್ತು ಉತ್ತಮ ಅವಕಾಶವಾಗಿದೆ. ಅಮೋಘ ಪ್ರತಿಭಾನ್ವಿತ ಆಟಗಾರರು ಈ ತಂಡದಲ್ಲಿದ್ದಾರೆ. ಈ ತಂಡವನ್ನು ಇನ್ನಷ್ಟು ಉನ್ನತ ಸಾಧನೆಯತ್ತ ಕೊಂಡೊಯ್ಯಲು ಉತ್ಸುಕನಾಗಿದ್ದೇನೆ‘ ಎಂದು ಸಂಜಯ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top