fbpx
ಸಮಾಚಾರ

ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿದ ರಜಿನಿಕಾಂತ್ ವಿರುದ್ಧ ಅಭಿಮಾನಿಗಳ ಆಕ್ರೋಶ!

ನಟ ಪುನೀತ್ ರಾಜಕುಮಾರ್ ಅಗಲಿಕೆಯಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಇನ್ನೂ ಮಾಸಿಲ್ಲ. ಪುನೀತ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ.. ಅಪ್ಪು ಅಂತಿಮ ದರ್ಶನ ಪಡೆಯಲು ಸಾಧ್ಯವಾಗದ ಪರ ಭಾಷಾ ನಟರು ಕೂಡ ಅಪ್ಪು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.

ಇನ್ನು ಡಾ. ರಾಜ್ ಕುಟುಂಬಕ್ಕೆ ಆಪ್ತರಾಗಿರುವ ರಜಿನಿಕಾಂತ್ ಅವರು ಅಪ್ಪು ನಿಧಾನವಾದಾಗ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಅದಕ್ಕೆ ಕಾರಣವೂ ಇದೆ, ಏಕೆಂದರೆ ಪುನೀತ್ ನಿಧಾನಗೊಂಡಾಗ ರಜಿನಿ ಕೂಡ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಜಿನಿಗೆ ವೈದ್ಯರು ಬೆಡ್ ರೆಸ್ಟ್ ಸೂಚಿಸಿದ್ದರಿಂದ ಅಪ್ಪು ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ.

 

 

ಆದರೆ ಪುನೀತ್ ನಿಧನಗೊಂಡಾಗ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ರಜಿನಿ ಅವರು ಅಪ್ಪು ಸಾವಿಗೆ ಸಂತಾಪ ಸೂಚಿಸಿರಲಿಲ್ಲ,. ಈ ಬಗ್ಗೆ ಒಂದು ಟ್ವೀಟ್ ಆಗಲಿ ಪೋಸ್ಟ್ ಆಗಲಿ ಮಾಡಿರಲಿಲ್ಲ. ಇದು ಅಭಿಮಾನಿಗಳಿಗೆ ಸಹಜವಾಗಿ ಬೇಸರ ತರಿಸಿತ್ತು.. ಈ ಮದ್ಯೆ ಇದೀಗ ತಲೈವಾ ರಜಿನಿ ತಮ್ಮ ಟ್ವಿಟರ್​ ಖಾತೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ನಿಧನಕ್ಕೆ ಇಂದು ಸಂತಾಪ ಸೂಚಿಸಿದ್ದಾರೆ.

‘ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಈ ವಿಷಯ ಗೊತ್ತಾಯಿತು. ತುಂಬ ನೋವಾಯಿತು. ಚಿಕ್ಕ ವಯಸ್ಸಿನಲ್ಲಿ ನಮ್ಮನ್ನ ಅಗಲಿದ್ದಾರೆ. ನನ್ನ ಕಣ್ಣೆದುರಿಗೆ ಬೆಳೆದ ಮಗು. ಒಳ್ಳೆ ಹೆಸರು, ಒಳ್ಳೆ ಯಶಸ್ಸು ಇರುವಾಗಲೇ ಈ ರೀತಿ ಆಗಿದ್ದು ದುಃಖಕರ. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಈ ಬಗ್ಗೆ ಏನು ಹೇಳಬೇಕೋ ತೋಚುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ’ ಎಂದು ವಾಯ್ಸ್​ ನೋಟ್​ನಲ್ಲಿ ಹೇಳಿದ್ದಾರೆ ರಜಿನಿಕಾಂತ್​.

 

 

ಸಂತಾಪ ಸೂಚಿಸಿ ಟ್ವೀಟ್​ ಮಾಡುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಅಷ್ಟಕ್ಕೂ ರಜಿನಿ ಮಾಡಿದ್ದ ಟ್ವೀಟ್​ನಿಂದ ನೆಟ್ಟಿಗರು ಸಿಟ್ಟಿಗೇಳಲು ಕಾರಣವೇನು ಗೊತ್ತಾ..? ರಜಿನಿಕಾಂತ್​ ಅವರು ಪುನೀತ್​ ರಾಜ್​ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ರಜಿನಿಕಾಂತ್ ತಮ್ಮ ಟ್ವೀಟ್​ನಲ್ಲಿ ಒಂದು ವಾಯ್ಸ್​ ನೋಟ್​ ನ ಲಿಂಕ್ ಅನ್ನು ಕೂಡ ಹಂಚಿಕೊಂಡಿದ್ದಾರೆ.. ಇದೇ ಕಾರಣದಿಂದ ನೆಟ್ಟಿಗರು ರಜಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟಕ್ಕೂ ರಜಿನಿ ಹಂಚಿಕೊಂಡಿರುವ ಆ ಆಡಿಯೋ ಲಿಂಕ್ (ಹೂಟ್​ ಆ್ಯಪ್) ಅವರ ಮಗಳ ಒಡೆತನದ್ದು, ಹೂಟ್ ಆಪ್ ನಲ್ಲಿ ವಾಯ್ಸ್​ ನೋಟ್​ ನೀಡಿರುವ ಲಿಂಕ್​ ಅನ್ನೂ ಸೇರಿಸಿದ್ದಾರೆ. ಸಾವಿನಂತ ಸೂಕ್ಷ್ಮ ವಿಚಾರದಲ್ಲಿಯೂ ಮಗಳ ಒಡೆತನ ಆ್ಯಪ್​ನ ಪ್ರಚಾರಕ್ಕೆ ನಿಂತಿದ್ದಾರೆ ಎಂದು ನೆಟ್ಟಿಗರು ಸಿಟ್ಟಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top