fbpx
ಸಮಾಚಾರ

9 ತಿಂಗಳ ವಿರಾಟ್ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಕಿಡಿಗೇಡಿ ಅರೆಸ್ಟ್

ಭಾರತ ಟಿ20 ಕ್ರಿಕೆಟ್ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಹೈದರಾಬಾದ್ ಮೂಲದ ವ್ಯಕ್ತಿ ಬಂಧಿಸಿದ್ದಾರೆ.

ಅಕ್ಟೋಬರ್ 24 ರಂದು ನಡೆದ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋತ ನಂತರ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ನಿರಂತರವಾಗಿ ಆನ್‌ಲೈನ್‌ನಲ್ಲಿ ಟೀಕೆಗೆ ಒಳಗಾದರು. ಕ್ಯಾಪ್ಟನ್ ವಿರಾಟ್ ಕೊಹ್ಲಿ ಶಮಿಯನ್ನು ಬೆಂಬಲಿಸಿ ಆನ್‌ಲೈನ್‌ನಲ್ಲಿ ‘ಸ್ಪೈನ್‌ಲೆಸ್’ ಎಂಬ ಘೋಷಣೆಯನ್ನು ನೀಡಿದರು. ಅದರ ನಂತರ ದ್ವೇಷಿಗಳು ವಿರಾಟ್ ಅವರ 9 ತಿಂಗಳ ಮಗಳನ್ನು ಗುರಿಯಾಗಿ ತೆಗೆದುಕೊಂಡಿದ್ದರು.

ಅದರಲ್ಲೂ @Criccrazyygirl ಎಂಬ ಟ್ವಿಟರ್ ಖಾತೆಯಿಂದ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದನು. ಈತ ಈಗ ಪೋಲೀಸರ ಅತಿಥಿಯಾಗಿದ್ದಾನೆ. 23 ವರ್ಷದ ಬಂಧಿತ ಆರೋಪಿ ಸಾಫ್ಟವೆರ್ ಇಂಜಿನಿಯರ್ ಎಂದು ತಿಲಿದುಬಂದಿದ್ದು ಹೈದರಾಬಾದ್ ನಿವಾಸಿಯಾಗಿದ್ದಾನೆ., ಫುಡ್ ಡೆಲೆವರಿ ಆ್ಯಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಅತ್ಯಾಚಾರ ಬೆದರಿಕೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, “ಆರೋಪಿ ರಾಮನಾಗೇಶ್‌ ಶ್ರೀನಿವಾಸ್‌ ಈ ಹಿಂದೆ ಆಹಾರ ವಿತರಾಣ ಆಪ್‌ಗಾಗಿ ಕಾರ್ಯ ನಿರ್ವಹಣೆ ಮಾಡಿದ್ದ. ಪ್ರಸ್ತುತ ಆತನನ್ನು ನಾವು ಹೈದರಾಬಾದ್‌ನಿಂದ ಮುಂಬೈಗೆ ಕರೆತರುತ್ತೇವೆ,” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top