fbpx
ಸಮಾಚಾರ

ಪಂದ್ಯ ಗೆದ್ದರೂ ಸಂಭ್ರಮಿಸದೇ ನಿಶಾಮ್ ಸುಮ್ಮನೆ ಕುಳಿತಿದ್ದು ಏಕೆ? ಕೊನೆಗೂ ಕಾರಣ ತಿಳಿಸಿದ ಜಿಮ್ಮಿ ನೀಶಾಮ್

ಯುಎಇ ನಲ್ಲಿ ನಡೆಯುತ್ತಿರುವ ಪುರುಷರ ಟಿ20 ವಿಶ್ವಕಪ್ ಕೊನೆ ಹಂತಕ್ಕೆ ಬಂದು ತಲುಪಿದ್ದು ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮನಿಸುವುದರ ಮೂಲಕ ನ್ಯೂಜಿಲೆಂಡ್ ತಂಡವು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಅಬುಧಾಬಿಯಲ್ಲಿ ನಡೆದ ರೋಚಕ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಇಂಗ್ಲೆಂಡ್ ತಂಡವನ್ನು ಮಣಿಸುತ್ತಿದ್ದಂತೆಯೇ ಡಗೌಟ್‌ನಲ್ಲಿದ್ದಂತಹ ನ್ಯೂಜಿಲೆಂಡ್ ಕ್ರಿಕೆಟ್‌ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ ಕುಣಿದು ಕುಪ್ಪಳಿಸಿದರು. ಆದರೆ ಅಲ್ಲೇ ಇದ್ದಂತಹ ಜೇಮ್ಸ್ ನೀಶಮ್ ಹಾಗೂ ಕೇನ್‌ ವಿಲಿಯಮ್ಸನ್‌ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೇ ಶಾಂತರೀತಿಯಿಂದ ಕುಳಿತುಕೊಂಡಂತಹ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪಂದ್ಯ ಮುಗಿದ ನಂತರ, ಇಡೀ ತಂಡವು ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಸಂಭ್ರಮಿಸಿತು. ಆದರೆ ನೀಶಮ್ ಡಗೌಟ್‌ನಲ್ಲಿ ತನ್ನ ಕುರ್ಚಿಯಲ್ಲಿ ಬಹಳ ಹೊತ್ತು ಕುಳಿತಿದ್ದರು. ಪಂದ್ಯದ ಬಳಿಕ ಈ ಕುರಿತು ಟ್ವೀಟ್ ಮಾಡಿರುವ ನಿಶಾಮ್, ‘ಕರ್ತವ್ಯ ಇನ್ನೂ ಮುಗಿದಿಲ್ಲ. ನನಗೆ ಹಾಗೇ ಅನಿಸುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top