fbpx
ಸಮಾಚಾರ

ಸದ್ಯದಲ್ಲೇ ನಾಲ್ಕು ಬಾರಿ ಮುಖಾಮುಖಿಯಾಗಲಿವೆ ಭಾರತ, ಪಾಕಿಸ್ತಾನ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಸಾಕು ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಕಣ್ಣುಗಳು ಅರಳುತ್ತವೆ. ಸಾಂಪ್ರದಾಯಿಕ ಎದುರಾಳಿಗಳು ಎಂದು ಅನಿಸಿಕೊಳ್ಳುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ 2008ರಿಂದ ಯಾವುದೇ ರೀತಿಯ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಆದರೂ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಟೂರ್ನಿಗಳಂತಹ ಐಸಿಸಿ ಇವೆಂಟ್ ಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುತ್ತವೆ.

ಅಂತೆಯೇ, 2019ರ ಏಕದಿನ ವಿಶ್ವಕಪ್ ನಲ್ಲಿ ಸೆಣಸಾಡಿದ್ದ ಉಭಯ ತಂಡಗಳು, 2 ವರ್ಷ, 4 ತಿಂಗಳು ಮತ್ತು 8 ದಿನಗಳ ನಂತರ ಮುಖಾಮುಖಿಯಾಗಿದ್ದು ಇತ್ತೀಚಿಗೆ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ. ಇದುವರೆಗೂ ವಿಶ್ವಕಪ್ ಗಳಲ್ಲಿ ಭಾರತದ ವಿರುದ್ಧ ಒಂದು ಪಂದ್ಯವನ್ನು ಕೂಡ ಗೆಲ್ಲದ ಪಾಕಿಸ್ತಾನವು ಆ ಪಂದ್ಯದಲ್ಲಿ ಭಾರತದ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು.

ಅದಾದ ಬಳಿಕ ಉಭಯ ತಂಡಗಳು ಮತ್ತೆ ಯಾವಾಗ ಕಣಕ್ಕಿಳಿಯಲಿವೆ ಎಂದು ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಅಸಲಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮತ್ತೆ ಯಾವಾಗ ನಡೆಯಲಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮುಂದಿನ ವರ್ಷದ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು ಅಲ್ಲಿಯೂ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆಯಿದೆ. ಹಾಗೆಯೆ, 2022ರಲ್ಲಿ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ನಡೆಯಲಿದ್ದು ಅಲ್ಲಿ ಕೂಡ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುವ ನಿರೀಕ್ಷೆ ಇದೆ.,

ಇನ್ನು 2023ರಲ್ಲಿ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದ್ದು ಈ ಟೂರ್ನಿಯಲ್ಲೂ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಏಕದಿನ ಪಂದ್ಯ ನಡೆಯುವುದು ನಿಶ್ಚಿತವಾಗಿದೆ. ಇನ್ನು ಅದೇ ವರ್ಷ(2023) ಭಾರತದ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದ್ದು ಅಲ್ಲಿ ಕೂಡ ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದು ಪಂದ್ಯ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top