fbpx
ಸಮಾಚಾರ

ಬಿಟ್ ಕಾಯಿನ್ ನಿಂದ ಹ್ಯಾಕರ್ ಶ್ರೀಕಿ ದೋಚಿರುವ ಒಟ್ಟು ಹಣ ಎಷ್ಟು ಗೊತ್ತಾ?

ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿ ಅನ್ನೋದು ಭಾರೀ ಸುದ್ದಿಯಲ್ಲಿದೆ. ಕ್ರಿಪ್ಟೋಕರೆನ್ಸಿ ಎಂದರೆ ಅದು ಡಿಜಿಟಲ್ ಆಸ್ತಿ. ಕೈನಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಅದು ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ ನಿಮ್ಮ ಖಾತೆಯಲ್ಲಿ ಇರುತ್ತದೆ. ಈ ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ಸುರಕ್ಷತೆ ಮಾಡಲಾಗುತ್ತದೆ.‘ಬ್ಲಾಕ್‌ ಚೈನ್’ ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಈ ಕರೆನ್ಸಿಯನ್ನು ವಿತರಿಸುವ ಹಲವು ಖಾಸಗಿ ಸಂಸ್ಥೆಗಳಿವೆ. ಆದ್ರೆ, ಸರ್ಕಾರವಾಗಲಿ, ಸರ್ಕಾರಿ ಸಂಸ್ಥೆಯಾಗಲಿ ಈ ವ್ಯವಹಾರ ನಡೆಸೋದಿಲ್ಲ ಹಾಗೂ ಭಾಗಿಯಾಗುವುದಿಲ್ಲ.

ಕ್ರಿಪ್ಟೋಕರೆನ್ಸಿಗಳ ಪೈಕಿ ಮೊದಲನೆಯದು ಬಿಟ್ ಕಾಯಿನ್. ಇದು ಇಂದಿಗೂ ಅತ್ಯಂತ ಜನಪ್ರಿಯವಾದ ಕ್ರಿಪ್ಟೋ ಕರೆನ್ಸಿ. ಜೊತೆಯಲ್ಲೇ ಸಾವಿರಾರು ಬಗೆಯ ಕ್ರಿಪ್ಟೋಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.

2009ರಲ್ಲಿ ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿತು. ಇದೀಗ ಮಾರ್ಚ್‌ 2021ರ ಅಂಕಿಅಂಶವನ್ನು ನೋಡಿದರೆ ಇಡೀ ವಿಶ್ವದಲ್ಲಿ ಒಟ್ಟು 18.6 ದಶ ಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ $927 ಬಿಲಿಯನ್ ಅಮೆರಿಕನ್ ಡಾಲರ್.

ಬಿಟ್‌ ಕಾಯಿನ್ ಮಾತ್ರವಲ್ಲ ಇನ್ನೂ ಹಲವು ಕ್ರಿಪ್ಟೋ ಕರೆನ್ಸಿ ವಿತರಣಾ ಕಂಪನಿಗಳು ಜನಪ್ರಿಯವಾಗಿವೆ. ಆಲ್ಟ್‌ ಕಾಯಿನ್, ಲೈಟ್ ಕಾಯಿನ್, ಪೀರ್ ಕಾಯಿನ್, ನೇಮ್ ಕಾಯಿನ್ ಹೀಗೆ ಹಲವು ಕಂಪನಿಗಳಿವೆ. ವಿಶ್ವದಲ್ಲಿ ಒಟ್ಟು 1.5 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳು ಇದ್ದು. ಈ ಪೈಕಿ ಶೇ. 60ರಷ್ಟು ಬಿಟ್‌ ಕಾಯಿನ್‌ಗಳೇ ಇವೆ.

ಕ್ರಿಪ್ಟೋ ಕರೆನ್ಸಿ ಬ್ಲಾಕ್‌ಚೈನ್ ವಿಧಾನವು ಅತ್ಯಂತ ಸುರಕ್ಷಿತ ಎಂದು ಹೇಳುತ್ತಾರೆ. ಆದ್ರೆ, ಅವು ಯಾವುದೇ ಕಾರಣಕ್ಕೂ ಹ್ಯಾಕ್ ಆಗೋದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕಳೆದ 10 ವರ್ಷಗಳ ಇತಿಹಾಸದಲ್ಲಿ ಬಿಟ್‌ ಕಾಯಿನ್‌ ವಹಿವಾಟಿನ ವೇಳೆ ಹಲವಾರು ಹ್ಯಾಕ್‌ಗಳು, ಕಳ್ಳನತ ಪ್ರಕರಣಗಳು ವರದಿಯಾಗಿವೆ. ಕೋಟ್ಯಂತರ ರೂ. ಮೌಲ್ಯದ ಕಾಯಿನ್‌ಗಳ ಕಳ್ಳತನವಾಗಿದೆ.

ಆದರೆ ಈಗ ಬಿಟ್ ಕಾಯನ್ ಬಳಸಿಕೊಂಡು ಹ್ಯಾಕ್‌ನಿಂದ ಶ್ರೀಕೃಷ್ಣ ಗಳಿಸಿರುವ ಹಣ ಎಷ್ಟು ಗೊತ್ತಾ?
ಭಾರತದಲ್ಲಿ ಹಲವಾರು ಕಂಪ್ಯೂಟರ್ ಹ್ಯಾಕಿಂಗ್ ಪ್ರಕರಣ ಗಳು ಆಗುತ್ತಲೇ ಇದೆ. ದಿನೇ ದಿನೇ ಒಬ್ಬರಲ್ಲ ಒಬ್ಬರು ಮೋಸ ಹೋಗುತ್ತಲೇ ಇದ್ದಾರೆ. ಕ್ರಿಪ್ಟೋಕರೆನ್ಸಿ ಎಂದರೆ ಅದು ಒಂದು ಡಿಜಿಟಲ್ ಆಸ್ತಿ. ಆದರೆ ಹ್ಯಾಕಿಂಗ್ ಮತ್ತು ಕಳ್ಳತನದಲ್ಲಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಇವನು ಡಾರ್ಕ್ ನೆಟ್‌ಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು.
ಬಿಟ್‌ಫೈನೆಕ್ಸ್ ಎಕ್ಸ್‌ಚೇಂಜ್ ಅನ್ನು ಹ್ಯಾಕ್ ಮಾಡಿ 2,000 ಬಿಟ್‌ಕಾಯಿನ್‌ಗಳನ್ನು ಪಡೆದುಕೊಂಡಿದ್ದೇನೆ ಎಂದು ಶ್ರೀಕೃಷ್ಣ ತಾನಾಗಿಯೇ ಹೇಳಿಕೆ ಕೊಟ್ಟಿದ್ದಾನೆ.

ಶ್ರೀಕೃಷ್ಣ ಅವರು ಕದ್ದ ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ಬ್ಲಾಕ್‌ಚೈನ್ ಟ್ರೇಸಿಂಗ್ ತಜ್ಞರ ಮೂಲಕ ಟ್ರ್ಯಾಕ್ ಮಾಡಬಹುದು. ಕದ್ದ ಬಿಟ್‌ಕಾಯಿನ್‌ಗಳನ್ನು ಪರಿಶೀಲನೆ ಮಾಡುವಾಗ ತಮ್ಮ ಟ್ರ್ಯಾಕ್‌ಗಳನ್ನು ಮುಚ್ಚ ಹಾಕಲು ಹ್ಯಾಕರ್‌ಗಳು ಬಳಸುವ ತಂತ್ರಗಳ ಬಗ್ಗೆ ಅವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top