fbpx
ಸಮಾಚಾರ

ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು: ವಿಡಿಯೋ ನೋಡಿ

ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ ತಂಡದ ಸಂಭ್ರಮ ಮುಗಿಲುಮುಟ್ಟಿತ್ತು. ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿ ಮೊದಲ ಬಾರಿಗೆ ಟಿ20 ಕಿರೀಟ ಮುಡಿಗೇರಿಸಿಕೊಂಡ ಆಸೀಸ್​ ಆಟಗಾರರು ತಡರಾತ್ರಿಯವರೆಗೆ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಶೂನಲ್ಲಿ ಬಿಯರ್ ಸುರಿದು ಕುಡಿಯುವ ಮೂಲಕ ಗಮನ ಸೆಳೆದರು.

 

 

ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋಯಿನಸ್ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂ ನಲ್ಲಿ ನಡೆದ ಆಟಗಾರರ ಸಂಭ್ರಮಾಚರಣೆಯಲ್ಲಿ ಮೊದಲು ವೇಡ್ ತಮ್ಮ ಕಾಲಿನ ಶೂ ಬಿಚ್ಚಿ ಅದಕ್ಕೆ ಬಿಯರ್ ಸುರಿದು ಕುಡಿದಿದ್ದಾರೆ. ಆ ಬಳಿಕ ಸ್ಟೋಯಿನಿಸ್ ಕೂಡ ಅದೇ ರೀತಿ ಬಿಯರ್ ಕುಡಿದು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗೆ ಆಸೀಸ್ ಆಟಗಾರರು ಶೂ ನಲ್ಲಿ ಬಿಯರ್ ಕುಡಿಯುತ್ತಿರುವ ವೀಡಿಯೋವನ್ನು ಐಸಿಸಿ ಪೋಸ್ಟ್ ಮಾಡಿದ್ದು, ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.

ಅಂದಹಾಗೆ ಆಸ್ಟ್ರೇಲಿಯನ್ ಫಾರ್ಮುಲಾ ಒನ್ ಚಾಲಕ ಡೇನಿಯಲ್ ರಿಕಿಯಾರ್ಡೊ ಅವರು ಈ ಆಚರಣೆಯನ್ನು ಮೊದಲು ಶುರು ಮಾಡಿದ್ದು, ಅವರು 2016 ರ ಜರ್ಮನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ವೇದಿಕೆಯ ಮೇಲೆ ಮೊದಲ ಬಾರಿಗೆ ಈ ರೀತಿ ಮಾಡಿದ್ದರು, ಅಂದಿನಿಂದ ಇದು ಜನಪ್ರಿಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top