fbpx
ಸಮಾಚಾರ

ಕೋವಿಡ್-19 ಲಸಿಕೆಯನ್ನು ಪಡೆದು ಒಂದು ಮಿಲಿಯನ್ ಡಾಲರ್ ಗೆದ್ದ ಮಹಿಳೆ

ಕೊರೋನಾ ಲಸಿಕೆ ಪಡೆದಿದ್ದಕ್ಕಾಗಿ ಆಸ್ಟ್ರೇಲಿಯಾ ಮಹಿಳೆಯೊಬ್ಬರು ಬರೋಬ್ಬರಿ ಹತ್ತು ಲಕ್ಷ ಆಸ್ಟ್ರೇಲಿಯನ್ ಡಾಲರ್ ಗೆದ್ದಿದ್ದಾರೆ. ಕೊರೋನಾ ವೈರಸ್ ನಿಂದ ರಕ್ಷಣೆ ನೀಡುವ ಲಸಿಕೆಯನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಅಕ್ಟೋಬರ್​ ತಿಂಗಳಲ್ಲಿ ಈ ವ್ಯಾಕ್ಸಿನ್​ ಲಾಟರಿಯನ್ನು ಅಲ್ಲಿನ ಸರ್ಕಾರ ಆಯೋಜನೆ ಮಾಡಿತ್ತು. ಇದು ವ್ಯಾಕ್ಸಿನ್​ ಹಾಕಿಸಿಕೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸಲು ಈ ರೀತಿ ಮಾಡಲಾಗಿತ್ತು. ಹಣ ಸಿಗುತ್ತೆ ಎಂದ ತಕ್ಷಣ ಸಾವಿರಾರು ಸಂಖ್ಯೆಯಲ್ಲಿ ಜನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು.

ಈ ವ್ಯಾಕ್ಸಿನೇಷನ್​ ಲಾಟರಿಯಲ್ಲಿ ​ಜೋನ್ನೆ ಝು ಎಂಬಾಕೆ ಗೆದ್ದಿದ್ದಾಳೆ. ಲಕ್ಕಿ ಡಿಪ್​ ಮೂಲಕ ವಿಜೇತರನ್ನ ಆಯ್ಕೆ ಮಾಡಲಾಗಿತ್ತು. ಜೋನ್ನೆ ಝು ಭಾರತದ ಕರೆನ್ಸಿ ಪ್ರಕಾರ 5 ಕೋಟಿಯ 49 ಲಕ್ಷ ರೂಪಾಯಿ ಹಣವನ್ನು ಗೆದ್ದಿದ್ದಾರೆ.

ಈ ಬಗ್ಗೆ ಜೋನ್ನೆ ಝು ಸಂತಸ ವ್ಯಕ್ತಪಡಿಸಿದ್ದಾಳೆ. “ನನಗೆ ಬಹುಮಾನದ ಬಗ್ಗೆ ಕರೆ ಬಂದಾಗ ನಾನು ಆಫೀಸ್​ನಲ್ಲಿದ್ದ ಕಾರಣ, ಸರಿಯಾಗಿ ಮಾತನಾಡಿಲ್ಲ. ಬಳಿಕ ಮನೆಗೆ ಬಂದು ಅದೇ ನಂಬರ್​ಗೆ ಕರೆ ಮಾಡಿದಾಗ ಅವರು ನೀವು ಒಂದು ಮಿಲಿಯನ್ ಹಣ ಗೆದ್ದಿದ್ದೀರಾ ಎಂದರು. ಆ ಕ್ಷಣ ನನಗೆ ಬಹಳ ಸಂತೋಷವಾಯಿತು” ಅಂತ ಹೇಳಿದರು ಎಂದು ಝು ತಿಳಿಸಿದ್ದಾರೆ.

ಇನ್ನು ಹಣ ಬಂದ ಬಳಿಕ ಜೋನ್ನೆ ಝು ತನ್ನ ಸ್ನೇಹಿತರನೆಲ್ಲ ರೆಸ್ಟೋರೆಂಟ್​​ಗೆ ಕರೆದುಕೊಂಡು ಹೋಗಿ ಪಾರ್ಟಿ ಕೊಡಿಸಿದ್ದಾಳೆ. ಈ ವೇಳೆ ಚೀನಾದಲ್ಲಿರುವ ತನ್ನ ಕುಟುಂಬವನ್ನು ಆಸ್ಟ್ರೇಲಿಯಾಗೆ ಶಿಫ್ಟ್ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top