fbpx
ಸಮಾಚಾರ

ಕೋವಿಡ್-19 ಲಸಿಕೆ ಪಡೆಯಲು ಹಿಂಜರಿದ ಟೀಮ್ ಇಂಡಿಯಾದ ಹಿರಿಯ ಆಟಗಾರ: ಟೀಂನಿಂದ ಕೈಬಿಟ್ಟ ಆಯ್ಕೆ ಸಮಿತಿ

ಟೀಂ ಇಂಡಿಯಾ ಟೆಸ್ಟ್ ತಂಡದ ಹಿರಿಯ ಆಟಗಾರ ಮುರಳಿ ವಿಜಯ್ ಸದ್ಯ ಎಲ್ಲಾ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರು ಒಂದು ಅವಕಾಶಕ್ಕೆ ಕಾಯುತ್ತಿದ್ದಾರೆ. ಆದರೆ ಮುರಳಿ ವಿಜಯ್ ಅನಿವಾರ್ಯ ಕಾರಣದಿಂದ ಮತ್ತೆ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಇದಕ್ಕೆ ಕಾರಣ ಕೋವಿಡ್ ಲಸಿಕೆ, ಅಚ್ಚರಿ ಎನಿಸಿದರೂ ಇದೆ ನಿಜ.

ಹೌದು, ಮರುಳಿ ವಿಜಯ್ ಇದುವರೆಗೂ ಕೊರೋನಾ ಲಸಿಕೆ ಪಡೆದುಕೊಂಡಿಲ್ಲ. ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಮರುಳಿ ವಿಜಯ್‌ಗೆ ಆಯ್ಕೆ ಸಮಿತಿ ಕೂಡ ಶಾಕ್ ನೀಡಿದೆ. ದೇಶೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುವ ವಿಜಯ್ ಅವರನ್ನು ಆಯ್ಕೆ ಸಮಿತಿ ತಮಿಳುನಾಡು ತಂಡದಿಂದ ಕೈಬಿಟ್ಟಿದೆ.

ಬಿಸಿಸಿಐಯ SOPಗಳನ್ನು ಅನುಸರಿಸಲು ಮುರಳಿ ವಿಜಯ್ ಉತ್ಸುಕರಾಗಿಲ್ಲ ಮತ್ತು ಇದರ ಪರಿಣಾಮವಾಗಿ, 37 ವರ್ಷ ವಯಸ್ಸಿನ ಅವರನ್ನು ತಮಿಳುನಾಡು ಪರ ಪಂದ್ಯಾವಳಿಗೆ ಆಯ್ಕೆ ಮಾಡಲು ಪರಿಗಣಿಸಲಾಗಿಲ್ಲ. ಪರಿಣಾಮ ಸೈಯದ್ ಅಲಿ ಮುಷ್ತಾಕ್ ಟೂರ್ನಮೆಂಟ್‌ನ ಮುಂದಿನ ಪಂದ್ಯಾವಳಿಗೆ ಅವರು ಭಾಗವಹಿಸುವಂತಿಲ್ಲ.

“ಇದು ಅವರ ವೈಯಕ್ತಿಕ ನಿರ್ಧಾರ. ಅವರು ಲಸಿಕೆ ತೆಗೆದುಕೊಳ್ಳಲು ಹಿಂಜರಿದಿದ್ದಾರೆ. ಬಿಸಿಸಿಐ SOP ಹೇಳುವಂತೆ, ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಆಟಗಾರನು ಒಂದು ವಾರದವರೆಗೆ ಬಯೋ ಬಬಲ್‌ನಲ್ಲಿ ಇರಬೇಕು ಮತ್ತು ನಂತರ ಅವನು ತಂಡದೊಂದಿಗೆ ಇರುವವರೆಗೆ ಆತ ಈ ನಿಯಮಕ್ಕೆ ಒಳಗಾಗಿರುತ್ತಾನೆ. ಆದರೆ ವಿಜಯ್ ಅದಕ್ಕೆ ಹೆಚ್ಚು ಒಲವು ತೋರಿಲ್ಲದ ಪರಿಣಾಮ ತಮಿಳುನಾಡು ಆಯ್ಕೆಗಾರರು ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ” ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top