fbpx
ಸಮಾಚಾರ

ನಟ ದುನಿಯಾ ವಿಜಯ್ ತಂದೆ ನಿಧನ

ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ ಅವರ ತಂದೆ ರುದ್ರಪ್ಪ ಅವರು ನಿಧನಗೊಂಡಿದ್ದಾರೆ. 81 ವರ್ಷ ವಯಸ್ಸಿನ ರುದ್ರಪ್ಪ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ರುದ್ರಪ್ಪನವರ ಅಂತ್ಯಕ್ರಿಯೆ ಆನೇಕಲ್‌ನ ಕುಂಬಾರ ಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ. ಕಳೆದ ಜೂಲೈ ನಲ್ಲಷ್ಟೇ ದುನಿಯಾ ವಿಜಯ್ ಅವರ ತಾಯಿ ಕೂಡ ಮರಣಗೊಂಡಿದ್ದರು. ಅವರು ಕೂಡ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದರು. ಈಗ ತಂದೆ ಕೂಡ ವಿಜಿ ಕುಟುಂಬವನ್ನು ಅಗಲಿದ್ದು ಪೋಷಕರನ್ನ ದುನಿಯಾ ವಿಜಯ್ ಕಳೆದುಕೊಂಡಿದ್ದಾರೆ.

 

 

ಇನ್ನು ತಂದೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ದುನಿಯಾ ವಿಜಯ್ ”ಮಿಸ್‌ ಯು ಅಪ್ಪ” ಎಂದು ಬರೆದುಕೊಂಡಿದ್ದಾರೆ. ದುನಿಯಾ ವಿಜಯ್ ತಂದೆ ಅಗಲಿಕೆಗೆ ವಿಜಯ್ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top