fbpx
ಸಮಾಚಾರ

ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗೋದು ಸ್ವಾತಂತ್ರ್ಯವಲ್ಲ, ಭಿಕ್ಷೆ: ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧಿ ವಿರುದ್ಧವೇ ನಟಿ ವಾಗ್ದಾಳಿ

ಸಿನಿಮಾ ವಿಚಾರಗಳಿಗಿಂತ ಕೇವಲ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇತ್ತೀಚಿಗೆ ಭಾರತದ ಸ್ವತಂತ್ರ ಹೋರಾಟವನ್ನು ಅಣಕಿಸಿ ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ವಿರುದ್ಧವೇ ಕಂಗನಾ ತೀವ್ರ ವಾಗ್ದಾಳಿ ಮಾಡಿದ್ದಾಳೆ.

ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂಬ ಗಾಂಧೀಜಿ ಅವರ ತತ್ವವನ್ನು ಅನುಸರಿಸಿದರೆ ನಿಮಗೆ ಸ್ವಾತಂತ್ರ್ಯ ಸಿಗುವುದಿಲ್ಲ , ಭಿಕ್ಷೆ ಮಾತ್ರ ಸಿಗುತ್ತದೆ ಎಂದು ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸರಣಿ ಫೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ’ಗಾಂಧಿ, ಇತರರು ನೇತಾಜಿಯನ್ನು ಹಸ್ತಾಂತರಿಸಲು ಒಪ್ಪಿದರು’ ಎಂಬ ಶೀರ್ಷಿಕೆಯುಳ್ಳ ಹಳೆಯ ಸುದ್ದಿಯನ್ನು ಹಂಚಿಕೊಂಡ ನಟಿ, ‘ನೀವು ಒಂದೇ ಗಾಂಧಿ ಇಲ್ಲದಿದ್ದರೆ ನೇತಾಜಿಯನ್ನು ಬೆಂಬಲಿಸಬಹುದು. ಇಬ್ಬರನ್ನೂ ಒಟ್ಟಿಗೆ ಬೆಂಬಲಿಸಲು ಸಾಧ್ಯವಿಲ್ಲ, ಆಯ್ಕೆಮಾಡಿ, ನಿರ್ಧರಿಸಿ ಎಂದು ಬರೆದಿದ್ದಾರೆ.

 

 

ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಂಗನಾ, ದಬ್ಬಾಳಿಕೆ ಮಾಡುವವರ ವಿರುದ್ಧ ಹೋರಾಟ ನಡೆಸುವ ಧೈರ್ಯವಿಲ್ಲದವರು ಸ್ವಾತಂತ್ರ್ಯ ಹೋರಾಟಗಾರರನ್ನು ತಮ್ಮ ಯಜಮಾನರಿಗೆ ಹಸ್ತಾಂತರಿಸಿದ್ದು ಕುತಂತ್ರ ಹಾಗೂ ಅಧಿಕಾರ ದಾಹವನ್ನು ತೋರಿಸುತ್ತದೆ. ಜಾಣ್ಮೆಯಿಂದ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಿ. ಜನರು ತಮ್ಮ ದೇಶದ ಇತಿಹಾಸ, ನಾಯಕರ ಬಗ್ಗೆ ತಿಳಿದುಕೊಳ್ಳಲು ಇದು ಸುಸಮಯ’ ಎಂದು ಬರೆದಿದ್ದಾರೆ.

 

 

ಭಾರತಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಎಂದು ಹೇಳಿಕೆ ನೀಡಿ ನಟಿ ಕಂಗನಾ ವಿವಾದಕ್ಕೆ ಗುರಿಯಾಗಿದ್ದರು. ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿ, ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕಂಗನಾ ಮತ್ತೊಂದು ಪೋಸ್ಟ್‌ ಕೂಡ ಹಾಕಿದ್ದರು.

ಪು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top