fbpx
ಸಮಾಚಾರ

ಸತ್ಯ ಹೇಳಿದ್ದಕ್ಕೆ ಕ್ಷಮೆ ಕೇಳಿಸಿಕೊಳ್ಳಲಾಗಿದೆ: “ಈ ದೇಶದ್ ಕಥೆ ಇಷ್ಟೇ ಕಣಮ್ಮೋ” ಹಂಸಲೇಖ ಬೆಂಬಲಿಸಿದ ಕವಿರಾಜ್

ಅಸ್ಪೃಶ್ಯತೆ ಮತ್ತು ಅಸಮಾನತೆ ಬಗ್ಗೆ ನಾದ ಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖ ಅವರು ಆಡಿರುವ ಮಾತು ಈಗ ವಿವಾದದ ಕಿಡಿ ಹೊತ್ತಿಸಿದೆ. “ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ..? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ..? ಲಿವರ್ ಕೊಟ್ರೆ ತಿಂತಾರಾ..? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ” ಎಂದು ಹೇಳಿದ್ದರು.

ಹಂಸಲೇಖರ ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಇದೀಗ ಚಿತ್ರ ಸಾಹಿತಿ ಮತ್ತು ನಿರ್ದೇಶಕ ಕವಿರಾಜ್ ಹಂಸಲೇಖ ಅವರ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಫೇಸ್ಬುಕ್ ನಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಮಾಡಿರುವ ಕವಿರಾಜ್ ಅವರು “ನಿಜವನ್ನು ಹೇಳಿದ್ದಕ್ಕಾಗಿ ಹಂಸಲೇಖ ಅವರಿಂದ ಬಲವಂತವಾಗಿ ಕ್ಷಮೆ ಕೇಳಿಸಿಕೊಳ್ಳಲಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ,

ಕವಿರಾಜ್ ಅವರ ಫೇಸ್ಬುಕ್ ಪೋಸ್ಟ್ ಯಥಾವತ್ತು ರೂಪ ಈ ರೀತಿ ಇದೆ:
ಹಂಸಲೇಖ ಸರ್ ಒಂದು ಅತ್ಯಂತ ಸದಾಶಯದ ಬದಲಾವಣೆಯ ವಿಷಯ ಪ್ರಸ್ತಾಪಿಸಿದ್ದರು. ಶತಮಾನಗಳಿಂದ ಹೀನಾಯವಾಗಿ ನಡೆಸಿಕೊಳ್ಳಲ್ಪಟ್ಟ ಜನರ ವೇದನೆಗೊಂದು ದನಿಯಾಗಿ ಮಾತಾಡಿದ್ದರು.
ದೌರ್ಜನ್ಯಕ್ಕೊಳಗಾದವರ ಆಕ್ರೋಶವನ್ನು ಪ್ರತಿನಿಧಿಸುವಾಗ ಅದಕ್ಕೆ ಪೂರಕವಾಗಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಬಳಸಿದ ಖಾರವೆನಿಸಿದ ಒಂದೆರೆಡು ಪದಗಳನ್ನು ಇಟ್ಟುಕೊಂಡು ಕ್ಷಮೆ ಕೇಳಿಸಿಕೊಳ್ಳಲಾಗಿದೆ .
ಆದರೆ ನಿಜವಾದ ಮಹತ್ವ ಸಿಗಬೇಕಾಗಿದ್ದು ಅವರ ಸದಾಶಯಕ್ಕೆ. ಅದು ಈ ಗಲಭೆಯಲ್ಲಿ ಮುಚ್ಚಿಯೇ ಹೋಯಿತು.ವಿಷಾದದ ವಿಷಯ ಎಂದರೆ ಅವರ ಮಾತುಗಳು ಯಾರ ಹಿತಾಸಕ್ತಿಯ ವಿರುದ್ಧವಿತ್ತೋ ಅವರೆಲ್ಲಾ ಒಂದಾಗಿ ಗಟ್ಟಿ ದನಿಯಲ್ಲಿ ವಿರೋಧಿಸಿದರು. ಆದರೆ ಅವರ ಮಾತುಗಳ ಕಾಳಜಿ ಯಾರ ಪರವಿತ್ತೋ ಆ ಬಹುಸಂಖ್ಯಾತ ಜನರು ತಮಗೇನು ಸಂಬಂಧವಿಲ್ಲ , ನಮಗೇಕೆ ಎಂಬಂತೆ ಮೂಕ ಪ್ರೇಕ್ಷಕರಾಗಿ ಕುಳಿತರು. ಕೊನೆಗೆ ಅವರದೇ ಹಾಡು ನೆನಪಾಗುತ್ತೆ
ಈ ದೇಶದ್ ಕಥೆ ಇಷ್ಟೇ ಕಣಮ್ಮೋ..
ಇಲ್ಲ್ ಚಿಂತೇ (ಚಿಂತನೆ) ಮಾಡಿ ಲಾಭ ಇಲ್ಲಮ್ಮೋ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top