fbpx
ಸಮಾಚಾರ

ಈ ಆಸೀಸ್ ದಂಪತಿ ಇಬ್ಬರೂ ಏಕದಿನ ಮತ್ತು ಟಿ20 ವಿಶ್ವಕಪ್ ಚಾಂಪಿಯನ್ನರು

ಇತ್ತೀಚಿಗೆ ದುಬೈನಲ್ಲಿ ಮುಕ್ತಾಯವಾದ ಪುರುಷರ T-20 ವಿಶ್ವಕಪ್ ಅನ್ನು  ಬಲಿಷ್ಠ ಆಸ್ಟ್ರೇಲಿಯ ತಂಡ ಗೆದ್ದುಕೊಂಡರು. ಈ ಮೂಲಕ T-20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯರು ಪ್ರಶಸ್ತಿ ಗರಿಯನ್ನು ತಮ್ಮ ಮುಡಿಗೇರಿಸಿ ಕೊಂಡರು.

ವಿಶೇಷವೆಂದರೆ ಚಾಂಪಿಯನ್ ಆಸ್ಟ್ರೇಲಿಯನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟಾರ್ ಆಟಗಾರರೊಬ್ಬರ ಪತ್ನಿ ಕೂಡ ಅತ್ರೇಲಿಯಾ ತಂಡವನ್ನು ಪ್ರತಿನಿಧಿಸಿ ವಿಶ್ವಕಪ್ ಗಳನ್ನ ಗೆದ್ದು ಚಾಂಪಿಯನ್ ಎನಿಸಿಕೊಂಡಿದ್ದಾರೆ. ಆ ಆಟಗಾರ ಯಾರು ಅಂದ್ರೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್. ಹೌದು ಸ್ಟಾರ್ಕ್ ಮತ್ತು ಅವರ ಪತ್ನಿ ಇಬ್ಬರೂ ಆಸ್ಟ್ರೇಲಿಯಾಗೆ ಆಡಿದ್ದು ಇಬ್ಬರೂ ವಿಶ್ವಕಪ್ ಗಳನ್ನ ಗೆದ್ದಿದ್ದಾರೆ.

ಸ್ಟಾರ್ಕ್ ಪತ್ನಿ ಅಲಿಸ್ಸಾ ಹೀಲಿ ಮಹಿಳಾ T-20 ವಿಶ್ವಕಪ್ ಗೆದ್ದಿದ್ದಾರೆ. ಹೀಲಿ ಅವರು 2010, 2012, 2014, 2018 ಮತ್ತು 2020 ರಲ್ಲಿ ಮಹಿಳೆಯರ T20 ವಿಶ್ವಕಪ್ ಮತ್ತು 2013 ರಲ್ಲಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿದ್ದಾರೆ. ಹಾಗೆಯೇ ಸ್ಟಾರ್ಕ್ 2015 ರಲ್ಲಿ ಒಮ್ಮೆ ODI ವಿಶ್ವಕಪ್ ಗೆದ್ದಿದ್ದಾರೆ. ಈ ಮೂಲಕ ಸ್ಟಾರ್ಕ್ ಮತ್ತು ಹೀಲಿ ಏಕದಿನ ಮತ್ತು ಟಿ20 ವಿಶ್ವಕಪ್ ಗಳನ್ನ ಗೆದ್ದಿರುವ ಏಕೈಕ ದಂಪತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಚಾಂಪಿಯನ್ ದಂಪತಿಗೆ ವಿಶ್ವಾದ್ಯಂತ ಇರುವ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top