fbpx
ಮನೋರಂಜನೆ

ಜಿಯೋಗಿಂತಲೂ ಬೆಸ್ಟ್ ಆಫರ್ ನೀಡಿದ ವೊಡಾಪೋನ್ ಐಡಿಯಾ!

ಜಿಯೋ ಮತ್ತು ಏರ್ಟೆಲ್ನ ಕೊಡುಗೆಗಳಿಗಿಂತ ಸ್ವಲ್ಪ ಹೆಚ್ಚೇ ಲಾಭವನ್ನು ವೊಡಾಫೋನ್ ಕೊಡುತ್ತಿದೆ ಎಂದರೆ ಆಶ್ಚರ್ಯವೇನಲ್ಲ. ಏಕೆಂದರೆ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುವ ಸಲುವಾಗಿ ವೊಡಾಫೋನ್ ಐಡಿಯಾ ಇದೀಗ ನೀಡುತ್ತಿರುವ ಯೋಜನೆಯೊಂದು ಗ್ರಾಹಕರನ್ನು ಸೆಳೆಯುವಲ್ಲಿ ಮುಂದಾಗಿದೆ.

ವೊಡಾಫೋನ್ ಐಡಿಯಾ 901 ರೂ. ಪ್ಲಾನ್ನ ವ್ಯಾಲಿಡಿಟಿ 84 ದಿನಗಳು. ಇದರಲ್ಲಿ ದಿನಕ್ಕೆ 3 GB ಡೇಟಾವನ್ನು ಪಡೆಯಬಹುದು. ಅಲ್ಲದೆ 48 GB ಡೇಟಾವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಅಂದರೆ ಈ ಯೋಜನೆಯಲ್ಲಿ ಪ್ರತಿದಿನ 300 ಜಿಬಿ ಡೇಟಾ ಲಭ್ಯವಿರುತ್ತದೆ. ಇದರೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಕೂಡ ಲಭ್ಯವಿರುತ್ತದೆ. ಡಿಸ್ನಿ + ಹಾಟ್ಸ್ಟಾರ್ ಮೊಬೈಲ್ ಗಳಲ್ಲಿ ಒಂದು ವರ್ಷದವರೆಗೆ ಸಿಗಲಿದೆ. ಕಂಪನಿಯು ಉಚಿತ ಡೇಟಾ ವಾರಾಂತ್ಯದ ಡೇಟಾ ರೋಲ್ಓವರ್ ಮತ್ತು ವಿ ಮೂವಿಗಳಂತಹ ಸೌಲಭ್ಯಗಳನ್ನು ರಾತ್ರಿ 12 ರಿಂದ ಬೆಳಿಗ್ಗೆ 6 ರವರೆಗೆ ನೀಡುತ್ತಿದೆ.

ಹಾಗೆ ಜಿಯೋ ಪ್ಲಾನ್ ನೋಡಿದರೆ ಯೋಜನೆ ಯಲ್ಲಿ ರೂ 999 ಪ್ಲಾನ್ ನಲ್ಲಿ ಲಭ್ಯವಿದೆ. ಆದರೆ ಅದರಲ್ಲಿ ಜಿಯೋ ಕಡಿಮೆ ಡೇಟಾವನ್ನು 84 ದಿನಗಳು ನೀಡುತ್ತಿದೆ. ಯೋಜನೆಯಲ್ಲಿ ದಿನಕ್ಕೆ 3 ಜಿಬಿ ಡೇಟಾ ಲಭ್ಯವಿದೆ. ಅಂದರೆ ಒಟ್ಟು 252 ಜಿಬಿ ಡೇಟಾ. ಯಾವುದೇ ನೆಟ್ವರ್ಕ್ನಲ್ಲಿ ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಸೌಲಭ್ಯವಿದೆ. ಇದಲ್ಲದೇ ಜಿಯೋ ಆಪ್ಗಳ ಉಚಿತ ಆ್ಯಪ್ ಸಹ ನೀಡಲಾಗಿದೆ.

ಎರಡೂ ಯೋಜನೆಗಳನ್ನು ಹೋಲಿಸಿದರೆ ವೊಡಾಫೋನ್ ಐಡಿಯಾ ಯೋಜನೆ ಜಿಯೋ ಪ್ಲಾನ್ ಗಿಂತ ಉತ್ತಮವಾಗಿದೆ. ಇದು ಹೆಚ್ಚಿನ ಡೇಟಾವನ್ನು ಪಡೆಯುತ್ತಿದೆ ಜೊತೆಗೆ ಡಿಸ್ನಿ + ಹಾಟ್ಸ್ಟಾರ್ ಕೂಡ ರಾತ್ರಿ ಉಚಿತ ಡೇಟಾ ಮತ್ತು ವಾರಾಂತ್ಯದ ರೋಲ್ಓವರ್ ಡೇಟಾ ಕೂಡಾ ಸಿಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top