fbpx
ಸಮಾಚಾರ

SRH ತಂಡಕ್ಕೆ ಟಾಂಗ್ ನೀಡಿದ ವಾರ್ನರ್ ಪತ್ನಿ

ಕಳೆದ ಐಪಿಎಲ್‌ನಲ್ಲಿ ಕಳಪೆ ಫಾರ್ಮ್ ನಿಂದಾಗಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕತ್ವ ಕಳೆದುಕೊಳ್ಳುವ ಜತೆಗೆ ಟೂರ್ನಿಯ 2ನೇ ಭಾಗದಲ್ಲಿ ಆಡುವ 11ರ ಬಳಗದಿಂದಲೂ ಹೊರಬಿದ್ದಿದ್ದ ಸ್ಟಾರ್ ಪ್ಲೇಯರ್ ಡೇವಿಡ್ ವಾರ್ನರ್, ಇದೀಗ ಟಿ20 ವಿಶ್ವಕಪ್‌ನಲ್ಲಿ ಆಸೀಸ್ ಗೆಲುವಿಗೆ ನೆರವಾಗುವ ಜತೆಗೆ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ..

 

 

ವಾರ್ನರ್ ಮ್ಯಾನ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ಗೆದ್ದ ಬಳಿಕ ಕ್ರೀಡಾ ಜಗತ್ತು ವ್ಯಾಪಕವಾಗಿ ಮೆಚ್ಚುಗೆ ಸೂಚಿಸಿತ್ತು. ಇದೀಗ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್, ಸನ್‌ರೈಸರ್ಸ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ವಿಶ್ವಕಪ್​ನಲ್ಲಿ ಪ್ಲೇಯರ್​ ಆಫ್ ದಿ ಟೂರ್ನಮೆಂಟ್ ಆದ ಬೆನ್ನಲ್ಲೇ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಟ್ವೀಟ್ ಮಾಡಿದ್ದಾರೆ. T20 ವಿಶ್ವಕಪ್ 2021 ಫೈನಲ್‌ನಲ್ಲಿನ ಡೇವಿಡ್ ವಾರ್ನರ್ ಅವರ ಅರ್ಧಶತಕದ ಫೋಟೋವನ್ನು ಹಂಚಿಕೊಂಡ ಅವರು ‘ಔಟ್ ಆಫ್ ಫಾರ್ಮ್!!’ ಎಂದು ಬರೆದುಕೊಂಡಿದ್ದಾರೆ. ಅದರೊಂದಿಗೆ ಆಶ್ಚರ್ಯಚಕಿತ ಮತ್ತು ನಗುವಿನ ಎಮೋಜಿಯನ್ನೂ ಪೋಸ್ಟ್ ಮಾಡಿದ್ದಾರೆ.

ಇನ್ನು ಪ್ಲೇಯರ್ ಆಫ್​ ದಿ ಟೂರ್ನಮೆಂಟ್‌ ಫೋಟೋವನ್ನು ಪೋಸ್ಟ್ ಮಾಡಿದ ಕ್ಯಾಂಡಿಸ್, ‘ಔಟ್ ಆಫ್ ಫಾರ್ಮ್,ಇದು ತುಂಬಾ ಹಳೆಯ ಮತ್ತು ತುಂಬಾ ತಡ ! ಎಂಬಾರ್ಥದಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿ ವಾರ್ನರ್ ಅವರ ಪತ್ನಿಯು ಎಸ್​ಆರ್​ಹೆಚ್​ ಫ್ರಾಂಚೈಸಿಯ ನಡೆಯನ್ನು ಪರೋಕ್ಷವಾಗಿ ಗುರಿಯಾಗಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top