fbpx
ಸಮಾಚಾರ

46ನೇ ವಯಸ್ಸಿನಲ್ಲಿ ಅವಳಿ ಮಕ್ಕಳ ತಾಯಿಯಾದ ಬಾಲಿವುಡ್​ ನಟಿ ಪ್ರೀತಿ ಜಿಂಟಾ

ಬಾಲಿವುಡ್ ನಟಿ ಪ್ರೀತಿ ಜಿಂಟಾ ತಾಯಿಯಾಗಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಪ್ರೀತಿ ಜಿಂಟಾ ಹಾಗೂ ಅವರ ಪತಿ ಜಿನ್ ಗುಡ್​ಎನಾಫ್ ಅವಳಿ- ಜವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಮಕ್ಕಳಿಗೆ ಜೈ ಜಿಂಟಾ ಗುಡ್​​ಎನಾಫ್ ಹಾಗೂ ಜಿಯಾ ಜಿಂಟಾ ಗುಡ್​​ಎನಾಫ್ ಎಂದು ನಾಮಕರಣ ಮಾಡಲಾಗಿದೆ.

 

 

ಪತಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ಪ್ರೀತಿ ಜಿಂಟಾ, ಎಲ್ಲರಿಗೂ ನಮಸ್ಕಾರ, ಇಂದು ನಾನು ನಿಮ್ಮೆಲ್ಲರೊಂದಿಗೆ ಸಿಹಿ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ಅವಳಿ ಮಕ್ಕಳಾದ ಜೈ ಜಿಂಟಾ ಗುಡ್‍ಎನಾಫ್ ಮತ್ತು ಜಿಯಾ ಜಿಂಟಾ ಗುಡ್‍ಎನಾಫ್ ರನ್ನು ನಮ್ಮ ಕುಟುಂಬಕ್ಕೆ ಬರಮಾಡಿಕೊಳ್ಳುತ್ತಿರುವುದಕ್ಕೆ ಜೀನ್ ಮತ್ತು ನನಗೆ ತುಂಬಾ ಸಂತೋಷವಾಗುತ್ತಿದೆ ಮತ್ತು ನಮ್ಮ ಹೃದಯ ಕೃತಜ್ಞತೆ ಮತ್ತು ತುಂಬಾ ಪ್ರೀತಿಯಿಂದ ತುಂಬಿವೆ. ನಮ್ಮ ಜೀವನದಲ್ಲಿನ ಈ ಹೊಸ ಪಯಣಕ್ಕೆ ಬಹಳ ಕಾತುರದಿಂದ ಕಾಯುತ್ತಿದ್ದೇವೆ. ಈ ಅದ್ಭುತ ಪ್ರಯಾಣದಲ್ಲಿ ಮಗುವನ್ನು ಪಡೆಯಲು ನೆರವಾದ ವೈದ್ಯರು, ನರ್ಸ್‍ಗಳಿಗೂ ಮತ್ತು ನಮ್ಮ ಬಾಡಿಗೆ ತಾಯಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

2016ರಲ್ಲಿ ಪ್ರೀತಿ ಜಿಂಟಾ ಹಾಗೂ ಜೆನೆ ಗುಡ್ ಇನಫ್​ ಅವರು ಪ್ರೀತಿಸಿ ವಿವಾಹವಾಗಿದ್ದರು. ಅದಕ್ಕೂ ಮೊದಲು ಐದು ವರ್ಷಗಳ ಕಾಲ ಈ ಜೋಡಿ ಡೇಟಿಂಗ್ ಮಾಡಿದ್ದರು. ಮದುವೆಯ ನಂತರ ಪತಿಯ ಜೊತೆ ವಿದೇಶದಲ್ಲಿ ನೆಲೆಸಿದ್ದ ಪ್ರೀತಿ ಜಿಂಟಾ ಆಗಾಗ ಭಾರತಕ್ಕೆ ಬರುತ್ತಿದ್ದರು. ಇತ್ತೀಚೆಗಷ್ಟೆ ಲಡಾಖ್​ಗೆ ಪ್ರವಾಸಕ್ಕೆಂದು ಬಂದಿದ್ದರು. ಈಗ ಮದುವೆಯಾಗಿ ಐದು ವರ್ಷಗಳ ನಂತರ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top