fbpx
ಸಮಾಚಾರ

“ಅಣ್ಣಾವ್ರ ಕುಟುಂಬದ ಬಗ್ಗೆ ತುಂಬಾ ಗೌರವವಿದೆ, ಆದರೆ ಅಪ್ಪು ಸರ್ 5 ಲಕ್ಷ ಕೊಟ್ಟಿಲ್ಲ” ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್

ನಟ ಪುನೀತ್ ರಾಜಕುಮಾರ್ ನಿಧನದ ಬಳಿಕ ಅವರು ಕೈಗೊಂಡಿದ್ದ ಎಂಷ್ಟೋ ಸಮಾಜ ಸೇವಾ ಕೆಲಸಗಳು ಬೆಳಕಿಗೆ ಬಂದಿತ್ತು. ಅನಾಥಾಶ್ರಮ, ವೃದ್ದಾಶ್ರಮ, ಗೋಶಾಲೆ ಹೀಗೆ ಅನೇಕ ಸಮಾಜ ಸೇವೆಯನ್ನು ಪುನೀತ್ ,ಆಡಿದ್ದರು ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿತ್ತು. ಹಾಗಂತ ಪುನೀತ್ ಮಾನವೀಯ ಕೆಲಸಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿರುವ ವಿಚಾರಗಳೆಲ್ಲಾ ನಿಜವಲ್ಲ. ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್​ಗಳಲ್ಲಿ ಕೆಲವೊಂದಿಷ್ಟು ನಕಲಿಯು ಇವೆ.

ನಟ ಬುಲೆಟ್ ಪ್ರಕಾಶ್ ನಿಧನರಾದಾಗ ಅವರ ಮನೆಗೆ ತೆರಳಿ ಕುಟುಂಬಕ್ಕೆ ಧೈರ್ಯ ತುಂಬಿದ್ದರು ಮತ್ತು 5 ಲಕ್ಷ ರೂ. ಧನಸಹಾಯವನ್ನು ಮಾಡಿದ್ದರು ಅಂತಾ ಸ್ವತಃ ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್​ ಹೇಳಿಕೊಂಡಿದ್ದಾರೆ ಎಂದು ಬರೆದಿರುವ ಎಡಿಟ್​ ಮಾಡಲಾದ ಪೋಸ್ಟ್​ ಒಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಅಸಲಿಗೆ ಈ ಪೋಸ್ಟ್ ಸುಳ್ಳಾಗಿದ್ದು ಈ ಬಗ್ಗೆ ಸ್ವತಃ ಬುಲೆಟ್ ಪ್ರಕಾಶ್ ಅವರ ಮಗನೆ ಸ್ಪಷ್ಟನೆ ನೀಡಿದ್ದಾನೆ.

ಪುನೀತ್ ರಾಜಕುಮಾರ್ ಅವ್ರು ಬುಲೆಟ್ ಪ್ರಕಾಶ್ ಕುಟುಂಬಕ್ಕೆ 5 ಲಕ್ಷ ಕೊಟ್ಟರೆಂಬ ಸುದ್ದಿ ಸುಳ್ಳೆಂದು ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್ ಅವರು ತಿಳಿಸಿದ್ದಾರೆ. “ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಟ್ಟಿಗೆ ಸ್ಪಷ್ಟನೆ ನೀಡಿರುವ ರಕ್ಷಕ್​, ಅಣ್ಣಾವ್ರ ಕುಟುಂಬದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ, ಪುನೀತ್​ ಸರ್​ ನಮ್ಮ ಕುಟುಂಬಕ್ಕೆ 5 ಲಕ್ಷ ರೂಪಾಯಿ ಕೊಟ್ಟಿಲ್ಲ. ಕೊಟ್ಟಿದ್ದಾರೆಂದು ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೇ. ಅದೆಲ್ಲ ಸುಳ್ಳು” ಎಂದು ಅಸಮಾಧಾನ ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top