fbpx
ಸಮಾಚಾರ

“ಹಂಸಲೇಖಗೆ ಕಿರುಕುಳ ನೀಡುತ್ತಿರುವ ಜಾತಿ ಪರಮಾಧಿಕಾರ ಬ್ರಾಹ್ಮಣ್ಯ ಗುಂಪುಗಳ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕು” ನಟ ಚೇತನ್ ಆಗ್ರಹ

ಅಸ್ಪೃಶ್ಯತೆ ಮತ್ತು ಅಸಮಾನತೆ ಬಗ್ಗೆ ನಾದ ಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖ ಅವರು ಆಡಿರುವ ಮಾತು ಈಗ ವಿವಾದದ ಕಿಡಿ ಹೊತ್ತಿಸಿದೆ. “ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ..? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ..? ಲಿವರ್ ಕೊಟ್ರೆ ತಿಂತಾರಾ..? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ” ಎಂದು ಹೇಳಿದ್ದರು.

ಹಂಸಲೇಖರ ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಇದೀಗ ನಟ ಚೇತನ್ “ಹಂಸಲೇಖ ಅವರ ಮಾತುಗಳನ್ನ ಹತ್ತಿಕ್ಕಲು ಯತ್ನಿಸಲಾಗುತ್ತಿದೆ” ಎಂದು ಹೇಳಿದ್ದಾರೆ. ತಮ್ಮ ಫೇಸ್ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಚೇತನ್ ಅವರು “ನಾವು ಹಂಸಲೇಖ ಅವರ ಜೊತೆ ನಿಲ್ಲಬೇಕು” ಎಂಬ ಕರೆನೀಡಿದ್ದಾರೆ.

 

 

“ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಗುಂಪುಗಳು ಹಂಸಲೇಖ ಅವರು ಕ್ಷಮೆಯಾಚಿಸಿ ಒಂದು ವಾರವಾದ ಮೇಲೆಯೂ ಕೂಡ ಪೊಲೀಸ್ ದೂರುಗಳನ್ನು ನೀಡುವ ಮೂಲಕ ಅವರಿಗೆ ಕಿರುಕುಳ ನೀಡುತ್ತಲೇ ಇವೆ. ಇಂತಹ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಸಂಸ್ಥೆಗಳು, ಸಮಾನತೆಯನ್ನು ಬಯಸುವ ಮತ್ತು ಅದಕ್ಕಾಗಿ ಹೋರಾಡುವ ನಮ್ಮನ್ನು, ತಮ್ಮ ಅಧೀನದಲ್ಲಿಯೇ ಮುಂದುವರಿಸಲು ಬಯಸುತ್ತವೆ. ನಾವು ಹಂಸಲೇಖ ಅವರ ಜೊತೆ ನಿಲ್ಲಬೇಕು.” ಎಂದು ಚೇತನ್ ತಿಳಿಸಿದ್ದಾರೆ.

 

 

ಮತ್ತೊಂದು ಪೋಸ್ಟ್ ನಲ್ಲಿ, “ಅಖಿಲ ಭಾರತ ಬ್ರಾಹ್ಮಣ ಮಹಾಸಭೆ ಎಂಬ ಬ್ರಾಹ್ಮಣ್ಯದ ಮತ್ತು ಜಾತಿ ಸುಪ್ರೆಮಸಿಸ್ಟ ಸಂಘಟನೆಯು – ಹಂಸಲೇಖ ಅವರು ಕ್ಷಮೆಯಾಚಿಸಿ ಹಲವಾರು ದಿನಗಳಾದ ಮೇಲೆಯೂ, ಪೊಲೀಸ್ ದೂರು ನೀಡುವ ಮೂಲಕ ಹಂಸಲೇಖ ಅವರನ್ನು ಬೆದರಿಸಿ / ಅವರ ಮಾನಹಾನಿ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ವಾಕ್ಸ್ವಾತಂತ್ರ್ಯವನ್ನು ನಂಬುವ ನಾವುಗಳು, ಈ ಬ್ರಾಹ್ಮಣ ಗುಂಪಿನ ವಿರುದ್ಧ ಕಾನೂನು ಬದ್ಧವಾಗಿರೊ ಯೆಲ್ಲಾ ಹೋರಾಟಗಳನ್ನು ಮಾಡಬೇಕು.” ಎಂದು ಚೇತನ್ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top