fbpx
ಸಮಾಚಾರ

ನಟಿ ರಚಿತಾ ರಾಮ್ ಮೇಲೆ ನಿಷೇಧ ಹೇರಲು ಆಗ್ರಹ

ಲವ್ ಯು ರಚ್ಚು ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ವೇಳೆ ನೀಡಿದ ‘ಫರ್ಸ್ಟ್ ನೈಟ್ ಕುರಿತ ಹೇಳಿಕೆ ರಚಿತಾ ರಾಮ್‌ರನ್ನು ಪೇಚಿಗೆ ಸಿಲುಕಿಸಿದೆ. ಕರ್ನಾಟಕದ ಹಲವು ಸಂಘಟನೆಗಳು ಡಿಂಪಲ್ ಕ್ವೀನ್ ವಿರುದ್ಧ ಕಿಡಿಕಾರಿದ್ದಾರೆ. ರಚಿತಾ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಟಿಯ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ನಟಿ ರಚಿತಾ ರಾಮ್​​ಅನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಕನ್ನಡ ಕ್ರಾಂತಿ ದಳ ಒತ್ತಾಯಿಸಿದೆ.

ಲವ್ ಯು ರಚ್ಚು ಚಿತ್ರದ ಮುದ್ದು ನೀನು ರೊಮ್ಯಾಂಟಿಕ್ ಸಾಂಗ್ ಬಿಡುಗಡೆ ವೇಳೆ ರಚಿತಾ ರಾಮ್ ನೀಡಿದ ಹೇಳಿಕೆ ರಾಜ್ಯದ ಬೇರೆ ಬೇರೆ ಕಡೆ ವಿರೋಧ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಕನ್ನಡ ಕ್ರಾಂತಿದಳ ಕೂಡ ವಿರೋಧ ವ್ಯಕ್ತಪಡಿಸಿತ್ತು. ಈ ವೇಳೆ ಬೇಜವಾಬ್ದಾರಿ ಹೇಳಿಕೆ ನೀಡಿದ ರಚಿತಾ ರಾಮ್‌ರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು. ಹೀಗಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಸಂಘಟನೆ ಮನವಿ ಮಾಡಿಕೊಂಡಿದೆ.

ಈ ಸಂಬಂಧ ಸಂಘಟನೆಯ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ನಟಿ ರಚಿತಾ ರಾಮ್ ಲವ್ ಯು ರಚ್ಚು ಚಿತ್ರದಲ್ಲಿ ಮಾಧ್ಯಮಗಳಿಗೆ ಫಸ್ಟ್ ನೈಟ್ ಬಗ್ಗೆ ಪ್ರಶ್ನಿಸಿದ್ದಾರೆ. ಒಬ್ಬ ನಟಿಯಾಗಿ ಗೌರವಯುತವಾಗಿ ಮಾತನಾಡದೆ ನಾಚಿಕೆ ಇಲ್ಲದೆ ನಾಲಿಗೆ ಹರಿಬಿಟ್ಟಿರುವ ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಸೂಕ್ಷ್ಮವಾಗಿ ಪರಿಗಣಿಸಿ ನಿಷೇಧ ಹೇರಬೇಕು. ಕ್ಷಮೆ ಯಾಚಿಸದಿದ್ದರೆ ಚಿತ್ರ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top