fbpx
ಸಮಾಚಾರ

“ಭಾರತ ಸಹ ಜಿಹಾದಿ ರಾಷ್ಟ್ರ, ಸರ್ವಾಧಿಕಾರವೊಂದೇ ಪರಿಹಾರ”: ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆದದ್ದಕ್ಕೆ ಕಂಗನಾ ಆಕ್ರೋಶ

ಸಿನಿಮಾ ವಿಚಾರಗಳನ್ನ ಬಿಟ್ಟು ಬೇರೆ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿರುವ, ಇತ್ತೀಚಿಗಷ್ಟೇ ಸ್ವಾತಂತ್ರ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಈಗ ಕೇಂದ್ರ ಸರ್ಕಾರ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, “ಬೇಸರ, ನಾಚಿಕೆಗೇಡು, ಸಂಪೂರ್ಣವಾದ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದ್ದಾರೆಯೇ ಹೊರತು ಸಂಸತ್ತಿನಲ್ಲಿ ಆಯ್ಕೆ ಮಾಡಿದ ಸರ್ಕಾರವಲ್ಲ, ಹೀಗಾದರೆ ನಮ್ಮದೂ ಕೂಡ ಜಿಹಾದಿ ರಾಷ್ಟ್ರವಾಗಲಿದೆ. ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು,” ಎಂದು ಆಕ್ರೋಶ ಹೊರ ಹಾಕಿದ್ದಾರೆ.

 

 

ಆನಂದ್ ರಂಗನಾಥನ್ ಅವರು ಮಾಡಿರುವ ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಕಂಗಾನಾ, ಅದರಲ್ಲಿ ‘ಆಘಾತಗೊಂಡಿದ್ದೇನೆ . ಇದು ಹೇಡಿತನದ ಕೃತ್ಯ. ಅಭಿವೃದ್ಧಿಗೆ, ವಿವೇಕಕ್ಕೆ, ಪ್ರಗತಿಗೆ, ಭಾರತಕ್ಕೆ ಅವಮಾನಕರ ಸೋಲು. ನಮ್ಮನ್ನು ದಶಕಗಳ ಹಿಂದೆ ಕರೆದುಕೊಂಡು ಹೋಗುವಲ್ಲಿ ನರೇಂದ್ರ ಮೋದಿ ವಿರೋಧ ಪಕ್ಷಕ್ಕೆ ಸೇರಿದ್ದಾರೆ. ಭಾರತ ಸೋತಿದೆ!, ಅರಾಜಕತೆಗೆ ಜಯವಾಗಿದೆ, ಕೆಟ್ಟ ದಿನಗಳು ಬಂದಿವೆ’ ಎಂದು ಬರೆದಿದ್ದಾರೆ..

ಎರಡನೇ ಪೋಸ್ಟ್‌ನಲ್ಲಿ, ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಚಿತ್ರವನ್ನು ಹಂಚಿಕೊಂಡಿದ್ದು, “ರಾಷ್ಟ್ರದ ಆತ್ಮಸಾಕ್ಷಿಯು ಆಳವಾದ ನಿದ್ರೆಯಲ್ಲಿರುವಾಗ, ಲಾತ್ (ಬೆತ್ತ) ಒಂದೇ ಪರಿಹಾರ ಮತ್ತು ಸರ್ವಾಧಿಕಾರವು ಏಕೈಕ ಪರಿಹಾರವಾಗಿದೆ… ಜನ್ಮದಿನದ ಶುಭಾಶಯಗಳು ಮೇಡಂ ಪ್ರೈಮ್‌ ಮಿನಿಸ್ಟರ್”‌ ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top