fbpx
ಸಮಾಚಾರ

“ಭವಿಷ್ಯ ರೂಪಿಸಲು ಪ್ರಯಾಣ ಪುನರಾರಂಭಿಸುತ್ತೇವೆ, ನಮಗೆ ಸಹಕಾರ ನೀಡಿ” ಪಿಆರ್ ಕೆ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಮನವಿ

ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ನಮ್ಮಿಂದ ದೂರ ಇದ್ದರೂ ಅವರ ನೆನಪುಗಳು ಮಾತ್ರ ಸದಾ ಜೀವಂತವಾಗಿವೆ. ಅವರು ಮಾಡಿರುವ ಕಲಾ ಸೇವೆ ಜನರ ಮನದಲ್ಲಿ ಜೀವಂತವಾಗಿದೆ. ಪುನೀತ್ ಒಡೆತನದಲ್ಲಿ ಪಿ.ಆರ್.ಕೆ ಸಂಸ್ಥೆ ನಿರ್ಮಾಣವಾಗಿತ್ತು. ಅಪ್ಪು ಅಕಾಲಿಕ ಮರಣದ ನಂತರ ಈ ಸಂಸ್ಥೆ ಪೂರ್ಣ ಜವಾಬ್ದಾರಿಯನ್ನು ಪುನೀತ್ ಪತ್ನಿ ಅಶ್ವಿನಿ ವಹಿಸಿಕೊಂಡಿದ್ದಾರೆ.

 

 

ಈ ಸಂಬಂಧ ಪತ್ರವನ್ನು ಟ್ವೀಟ್ ಮಾಡಿರುವ ಪಿಆರ್ ಕೆ ಆಡಿಯೋ, ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯವಾಗಿದೆ. ಆದರೆ ಪುನೀತ್ ರಾಜ್ ಕುಮಾರ್ ರವರು ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿ.ಆರ್.ಕೆ ಪ್ರೊಡಕ್ಷನ್ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ.

ಪಿ.ಆರ್.ಕೆ.ಪ್ರೊಡಕ್ಷನ್ಸ್ 2017ರ ಜುಲೈ 20 ರಂದು ಶುರುವಾಯಿತು. ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡ ಮೊಟ್ಟ ಮೊದಲ ಸಿನಿಮಾ ‘ಕವಲುದಾರಿ’, ಬಳಿಕ ‘ಮಾಯಾಬಜಾರ್ 2016’, ‘ಲಾ’, ‘ಫ್ರೆಂಚ್ ಬಿರಿಯಾನಿ’ ಚಿತ್ರಗಳು ಇದೇ ಪಿ.ಆರ್.ಕೆ.ಪ್ರೊಡಕ್ಷನ್ಸ್‌ನಿಂದ ಬಿಡುಗಡೆ ಆಗಿತ್ತು. ಸದ್ಯ ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಓ2’ ಚಿತ್ರಗಳು ನಿರ್ಮಾಣ ಆಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top