fbpx
ಸಮಾಚಾರ

ಹಂಸಲೇಖ ವಿರುದ್ಧ ದಾಖಲಾಗಿದ್ದ ದೂರು ವಾಪಸ್: ದೂರುದಾರ ಕೊಟ್ಟ ಕಾರಣ ಇದು

ಉಡುಪಿ ಮಠದ ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಂಗೀತ ಮಾತ್ರಿಕ ಹಂಸಲೇಖ ವಿರುದ್ಧ ದಾಖಲಾಗಿದ್ದ ದೂರನ್ನು ಕೃಷ್ಣರಾಜ್ ಎಂಬುವರು ಹಿಂಪಡೆದುಕೊಂಡಿದ್ದಾರೇ.

ಕೃಷ್ಣರಾಜ್​​ ಎಂಬುವರು ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಸವನಗುಡಿಯಲ್ಲಿ ಹಂಸಲೇಖಾರ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ತಮ್ಮ ದೂರವನ್ನು ಹಿಂಪಡೆದುಕೊಂಡಿದ್ದಾರೆ. ಬ್ರಾಹ್ಮಣ ಸಂಘದ‌ ದೂರಿಗೆ ತಾನು ಬೆಂಬಲಿಸ್ತೇನೆ. ಅದಕ್ಕಾಗಿ ನನ್ನ ದೂರನ್ನು ಹಿಂಪಡೆಯುವುದಾಗಿ ಕೃಷ್ಣರಾಜ್​, ಪೊಲೀಸರಿಗೆ ಸಮಜಾಯಿಷಿ ನೀಡಿದ್ದಾರೆ.

ಏನಿದು ಘಟನೆ:
ಹಂಸಲೇಖ ಅವರು ಕೆಲದಿನಗಳ ಹಿಂದೆ ಮೈಸೂರಿನಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮಕ್ಕೆ ತನ್ನ ಪತ್ನಿ ಸಮೇತ ತೆರಳಿದ್ದರು. ಅಲ್ಲಿ ಮಾತನಾಡುವ ಸಂದರ್ಭ ಅಸ್ಪೃಶ್ಯತೆ ಮತ್ತು ಜಾತ್ಯಾತೀತತೆ ಬಗ್ಗೆ ಮಾತನಾಡುವ ಉದ್ದೇಶ ಹಂಸಲೇಖ ಅವರದ್ದಾಗಿತ್ತು. ಹೀಗೆ ಮಾತನಾಡುವ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

“ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ..? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ..? ಲಿವರ್ ಕೊಟ್ರೆ ತಿಂತಾರಾ..? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ” ಎಂದು ಹೇಳಿದ್ದರು. ಹಂಸಲೇಖರ ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top