fbpx
ಸಮಾಚಾರ

ಕಾರು ಅಪಘಾತ, ಮಾನವಿಯತೆ ಮೆರೆದ ಸಂಸದ ಪ್ರತಾಪ್ ಸಿಂಹ

ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಪ್ರತಾಪ್​ ಸಿಂಹ ಅಪಘಾತಕ್ಕೀಡಾದವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಒಂದು ಕ್ಷಣ ಈ ಆ್ಯಕ್ಸಿಡೆಂಟ್​​ ಪ್ರತಾಪ್​ ಸಿಂಹ ಅವರ ಕಾರಿನದ್ದೇ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆಯೂ ಪ್ರತಾಪ್​ ಸಿಂಹ ಸ್ಪಷ್ಟನೆ ನೀಡಿ, ಬೇರೆಯವರದ್ದು ಎಂದರು.

ಚನ್ನಪಟ್ಟಣದ ಹೊರವಲಯದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮುದುಗೆರೆ ಬಳಿ ಹೋಟೆಲ್ ವೊಂದರಲ್ಲಿ ಪ್ರತಾಪ ಸಿಂಹ ಅವರು ಊಟ ಮಾಡುತ್ತಿದ್ದ ವೇಳೆ ಅಪಘಾತದ ಸದ್ದು ಕೇಳಿಸಿದೆ.

ತಕ್ಷಣ ಹೊರ ಬಂದು ನೋಡಿದಾಗ ಕಾರೊಂದು ಪಲ್ಟಿಯಾಗಿತ್ತು. ಗಾಯಳುಗಳನ್ನ ಆಸ್ಪತ್ರೆಗೆ ಸೇರಿಸಲು ಅವರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top