fbpx
ಸಮಾಚಾರ

ಮುಡಿ ತೆಗೆಸಿ ವಿಜಯಲಕ್ಷ್ಮಿ ಪ್ರತ್ಯಕ್ಷ, ಪುನೀತ್ ಗಾಗಿ ಹಾಡು ಹಾಡಿದ ನಾಗಮಂಡಲ ಚೆಲುವೆ: ವಿಡಿಯೋ ವೈರಲ್

ಒಂದು ಕಾಲದಲ್ಲಿ ತನ್ನ ರೂಪ ಲಾವಣ್ಯದಿಂದಲೇ ಕನ್ನಡ ಸಿನಿರಸಿಕರ ಮನಗೆದ್ದಿದ್ದ ನಟಿ ವಿಜಯಲಕ್ಷ್ಮಿ. ಚಿತ್ರರಂಗದಲ್ಲಿ ಕೈತುಂಬಾ ಅವಕಾಶಗಳಿರುವಾಗಲೇ ಅದ್ಯಾಕೋ ಸಂಪೂರ್ಣವಾಗಿ ತೆರೆಮರೆಗೆ ಸರಿದು ನಾಪತ್ತೆಯಾಗಿದ್ದ ವಿಜಯಲಕ್ಷ್ಮಿ ಇತ್ತೀಚಿಗೆ ಯಾವುದೇ ಅವಕಾಶಗಲ್ಲಿದೆ ಕೇವಲ ಫೇಸ್ಬುಕ್ ನಲ್ಲಿ ವಿಡಿಯೋ ಮಾಡುವುದಕ್ಕೆ ಮಾತ್ರ ಸೀಮಿತಗೊಂಡಿದ್ದಾರೆ.

 

 

ಇತ್ತೀಚಿಗೆ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ವಿಜಯಲಕ್ಷ್ಮಿ ಸದ್ಯ ದೇವರಿಗೆ ಮುಡಿಕೊಟ್ಟು ಬೋಳು ತಲೆಯ ಅವತಾರದಲ್ಲಿ ಫೇಸ್ಬುಕ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ದೇವರಿಗೆ ಮುಡಿಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ್ದಾರೆ. ಡಾ. ರಾಜ್​ಕುಮಾರ್​ ನಟನೆಯ ‘ಕ್ರಾಂತಿ ವೀರ’ ಸಿನಿಮಾದ ‘ಯಾರು ಏನು ಮಾಡುವರು..’ ಹಾಡನ್ನು ವಿಜಯಲಕ್ಷ್ಮೀ ಹೇಳಿದ್ದಾರೆ. ಈ ರೀತಿ ಮಾಡುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

‘ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ನನಗೆ ಏನಾಯಿತು ಎಂದು ನೀವೆಲ್ಲಾ ಯೋಚನೆ ಮಾಡುತ್ತಿರಬಹುದು. ಇದು ನಮ್ಮ ಮನೆದೇವರ ಹರಕೆ. ಮೊದಲೆಲ್ಲ ಇದನ್ನು ತಂದೆ ಮಾಡುತ್ತಿದ್ದರು. ಈಗ ತಂದೆ ಇಲ್ಲ. ಅಕ್ಕನ ಆರೋಗ್ಯ ಸರಿಯಿಲ್ಲ. ಹಾಗಾಗಿ ಹರಕೆಯ ಜವಾಬ್ದಾರಿ ನಾನು ತೆಗೆದುಕೊಂಡೆ. ಮನೆ ದೇವರಿಗೆ ಕೂದಲು ಕೊಟ್ಟಿದ್ದೇನೆ’ ಎಂದು ತಲೆ ಬೋಳಿಸಿಕೊಂಡಿದ್ದಕ್ಕೆ ವಿಜಯಲಕ್ಷ್ಮೀ ಕಾರಣ ತಿಳಿಸಿದ್ದಾರೆ.

ಪುನೀತ್​ ಅದ್ಭುತ ಡ್ಯಾನ್ಸರ್​ ಆಗಿದ್ದರು. ಅವರ ಪ್ರತಿಭೆ ಮತ್ತು ಬದ್ಧತೆ ಎಲ್ಲರಿಗೂ ಸ್ಫೂರ್ತಿ ಆಗುವಂಥದ್ದು. ಎಷ್ಟು ವರ್ಷಗಳು ಕಳೆದರೂ ಪುನೀತ್​ ಇಲ್ಲ ಎಂಬುದನ್ನು ನಂಬಲು ಆಗುವುದಿಲ್ಲ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top