fbpx
ಸಮಾಚಾರ

ನೊಬೆಲ್​ ವಿಶ್ವ ದಾಖಲೆ ಪಟ್ಟಿ ಸೇರಿದ ಅಲ್ಲು ಅರ್ಜುನ್​ ಮಗಳು: ಅಲ್ಲು ಅರ್ಹಾ ಸಾಧನೆ ಏನು ಗೊತ್ತಾ?

ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲೂ ಅರ್ಜುನ್ ಅವರ ಮಗಳು ಅಲ್ಲೂ ಅರ್ಹಾ ಇತ್ತೀಚಿಗೆ ಶಕುಂತಲಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಎಳೆ ವಯಸ್ಸಿನಲ್ಲಿಯೇ ನಟನೆ ಮಾಡಿ ಸೈ ಎನಿಸಿಕೊಂಡ ಅರ್ಹಾ ಈಗ ನೊಬೆಲ್​ ವಿಶ್ವ ದಾಖಲೆ ಪಟ್ಟಿ ಸೇರಿದ್ದಾಳೆ. ಅಷ್ಟಕ್ಕೂ ವಿಶ್ವ ದಾಖಲೆ ಪಟ್ಟಿ ಸೇರಲು ಅರ್ಹಾ ಮಾಡಿದ ಸಾಧನೆಯಾದರೂ ಏನು ಅಂತೀರಾ? ಮುಂದೆ ಓದಿ

 

 

View this post on Instagram

 

A post shared by Allu Sneha Reddy (@allusnehareddy)

 

ಅರ್ಹಾ ಅತಿ ಚಿಕ್ಕ ವಯಸ್ಸಿಗೆ ಅಲ್ಲು ಅರ್ಹಾ ಚೆಸ್​ ಟ್ರೇನರ್​ ಆಗಿದ್ದಾಳೆ. ಅಲ್ಲು ಅರ್ಹಾ ಕುಟುಂಬದ ಸದಸ್ಯರ ಎದುರು ಚೆಸ್​ ಆಡಿದ್ದಾಳೆ. ಈ ವಿಡಿಯೋವನ್ನು ಅಲ್ಲು ಅರ್ಜುನ್​ ಪತ್ನಿ ಸ್ನೇಹಾ ರೆಡ್ಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಲ್ಲು ಅರ್ಹಾಗೆ ನೊಬೆಲ್​ ವರ್ಲ್ಡ್​ ರೆಕಾರ್ಡ್​ ನೀಡಿ ಗೌರವಿಸಲಾಗಿದೆ. ಇದು ಅಲ್ಲು ಅರ್ಜುನ್​ ಕುಟುಂಬಕ್ಕೆ ಖುಷಿ ನೀಡಿದೆ.

ಈ ಕುರಿತು ಅಲ್ಲು ಅರ್ಜುನ್‌ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಶೇರ್‌ ಮಾಡಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಅವರು, ತಮ್ಮ ಪುತ್ರಿಯ ಸಾಧನೆಯ ಕುರಿತು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಚೆಸ್‌ ಆಡುತ್ತಿರುವುದನ್ನು ನೋಡಬಹುದಾಗಿದೆ. ಜತೆಗೆ, ಅರ್ಹಾಗೆ ನೊಬೆಲ್ ವರ್ಲ್ಡ್​ ರೆಕಾರ್ಡ್ ನೀಡಿ ಗೌರವಿಸುವುದನ್ನು ನೋಡಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top