fbpx
ಸಮಾಚಾರ

ಜನರಲ್ಲಿ ಆತಂಕ ಸೃಷ್ಟಿ ಮಾಡಿದ ಮೊಸಳೆ.

ಮೊಸಳೆಗಳನ್ನು ಚಿತ್ರದಲ್ಲಿ ನೋಡಿದರೇನೆ ಒಂದು ಕ್ಷಣ ಭಯ ಆವರಿಸಿಕೊಳ್ಳತ್ತೆ. ಅಂತದ್ರಲ್ಲಿ ಇದ್ದಕ್ಕಿದ್ದಂತೆ ಕಣ್ಣೆದುರು ಕಾಣಿಸಿಕೊಂಡರೆ ಹೇಗಿರತ್ತೆ. ಎಂತಹ ಗಟ್ಟಿ ಗುಂಡಿಗೆಯವರಾದರೂ ಒಂದು ಕ್ಷಣ ಹೆದರಿ ಹೈರಾಣಾಗುತ್ತಾರೆ.

ಇಂತಹ ಪರಿಸ್ಥಿತಿ ಇವತ್ತು ಬೆಳಗ್ಗೆ ಮೈಸೂರಿನ ಪೌರಕಾರ್ಮಿಕರದ್ದಾಗಿತ್ತು. ಎಂದಿನಂತೆ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರು ಒಂದು ಕ್ಷಣ ಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದ ಮೊಸಳೆ ಕಂಡು ಒಂದು ಕ್ಷಣ ಹೌಹಾರಿದ್ದರು.

ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಮೊಸಳೆ ಕಂಡು ಬರೋದು ಹೊಸತೇನಲ್ಲ. ಅಂದ ಹಾಗೆ ಈ ಬಾರಿ ಕಂಡು ಬಂದಿದ್ದು ಮೈಸೂರಿನ ತ್ಯಾಜ್ಯ ವಿಲೇವಾರಿ ಘಟಕ ಸ್ಟೀವೇಜ್ ಫಾರಂನಲ್ಲಿ.

ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿಯುವ ಭರವಸೆ ನೀಡಿದ್ದಾರೆ. ಕಳೆದ ವರ್ಷವೂ ಇಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದ ಇನ್ನೂ ಹೆಚ್ಚಿನ ಮೊಸಳೆಗಳಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top