fbpx
ಸಮಾಚಾರ

ಪುನೀತ್ ಫ್ಲೆಕ್ಸ್ ಹರಿದು ವಿಕೃತಿ: ಕಿಡಿಗೇಡಿಗೆ ಹಿಗ್ಗಾಮುಗ್ಗಾ ಧರ್ಮದೇಟು ಕೊಟ್ರು ಜನ.

ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ನಮ್ಮಿಂದ ದೂರ ಇದ್ದರೂ ಅವರ ನೆನಪುಗಳು ಮಾತ್ರ ಸದಾ ಜೀವಂತವಾಗಿವೆ. ಅವರು ಮಾಡಿರುವ ಕಲಾ ಸೇವೆ ಜನರ ಮನದಲ್ಲಿ ಜೀವಂತವಾಗಿದೆ. ಅಪ್ಪು ಅಕಾಲಿಕ ಮರಣದ ನೋವು ಕನ್ನಡಿಗರಲ್ಲೇ ಇರುವಾಗಲೇ ಅವರ ಫ್ಲೆಕ್ಸ್ ಹರಿದಿರುವ ದುರ್ಘಟನೆ ನಡೆದಿದೆ.

ಇದು ಚಿಕ್ಕಮಗಳೂರು ನಲ್ಲಿ ನಡೆದ ಘಟನೆ ಅಪ್ಪು ಫೋಟೋ ಇರುವ ಫ್ಲೆಕ್ಸ್ ಮಾರ್ಕೆಟ್ ರಸ್ತೆಯಲ್ಲಿ ಹಾಕಿದ್ದರು. ಅಪ್ಪು ನೆನಪಿಗಾಗಿ ದೊಡ್ಡದಾದ ಹೂವಿನ ಹಾರ ಕೂಡ ಹಾಕಲಾಗಿತ್ತು. ಆದರೆ ಇದನ್ನು ನೋಡಿ ಸಹಿಸಿಕೊಳ್ಳಗಾದ ಕಿಡಿಗೇಡಿಯೊಬ್ಬ ಅಪ್ಪು ಬ್ಯಾನರ್ ಅನ್ನು ಹರಿದುಹಾಕಿದ್ದಾನೆ.

ಪುನೀತ್ ಬ್ಯಾನರ್ ಅನ್ನು ಹರಿದುಹಾಕುತ್ತಿದ್ದನ್ನು ನೋಡಿದ ಜನರು ಯುವಕನಿಗೆ ಮನಸೋಯಿಚ್ಚೆ ಧರ್ಮದೇಟು ಕೊಟ್ಟಿದ್ದಾರೆ. ಅವನ ಮೇಲೆ ಫ್ಲೆಕ್ಸ್ ಅನ್ನು ಹಾಕಿ ಅವನನ್ನು ಚಿಕ್ಕಮಗಳೂರು ಪೊಲೀಸ್ ಠಾಣೆಗೆ ಕರ್ಕೊಂಡು ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಇದು CCTV ನಲ್ಲಿ ರೆಕಾರ್ಡ್ ಆಗಿದೆ. ಆ ದೃಶ್ಯ ಈಗ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗ್ತಾ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top