ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನರಾಗಿ 23 ದಿನಗಳೇ ಕಳೆದಿವೆ. ಆದರೂ ಅವರಿಲ್ಲ ಎಂಬ ನೋವು ಮಾತ್ರ ಎಲ್ಲರನ್ನೂ ಕಾಡುತ್ತಲೇ ಇದೆ. ಈ ಮಧ್ಯೆ ಅವರ ಬಯೋಪಿಕ್ ಕುರಿತು ಒಂದು ಸುದ್ದಿ ಕೇಳಿಬಂದಿದೆ. ಆ ಕುರಿತು ಇಲ್ಲಿದೆ ಮಾಹಿತಿ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 23 ದಿನಗಳಾಗಿವೆ. ಆದರೂ ಅವರಿಲ್ಲ ಅನ್ನೋ ಭಾವನೆ ಯಾರಲ್ಲೂ ಇಲ್ಲ. ಅವರ ಅಗಲಿಕೆಯ ನೋವಿನಿಂದ ಯಾರಿಗೂ ಹೊರಬರಲು ಆಗುತ್ತಿಲ್ಲ. ಈಗಲೂ ಪ್ರತಿದಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಸಾವಿರಾರು ಜನ ಭೇಟಿ ನೀಡುತ್ತಲೇ ಇದ್ದಾರೆ.ಅಭಿಮಾನಿಗಳು ಪ್ರತಿದಿನ, ಪ್ರತಿಕ್ಷಣ ನೆನೆಯುತ್ತಿದ್ದಾರೆ. ಈ ಹಿನ್ನೆಲೆ ಯಲ್ಲಿ ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅವರನ್ನು ಅಪ್ಪು ಬಯೋಪಿಕ್ ತೆಗೆಯುವಂತೆ ಮನವಿ ಮಾಡಿಕೊಂಡಿದ್ದು, ರಾಮ್ ಅದಕ್ಕೆ ಒಪ್ಪಿಕೊಂಡಿದ್ದಾರೆ.
I’ll try my level best to bring this idea on screen 🙏 #appusirliveson https://t.co/ivcPkm7HyF
— Santhosh Ananddram (@SanthoshAnand15) November 21, 2021
ಸಂತೋಷ್ ಆನಂದ್‌ರಾಮ್ ಅವರಿಗೆ ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬ ಸಂತೋಷ್ ಆನಂದ್‌ರಾಮ್ ಸರ್.ಅಪ್ಪು ಸರ್ ಬಗ್ಗೆ ಒಂದು ಬಯೋಪಿಕ್ ಮಾಡಿ. ನೀವು ಅವರನ್ನು ತುಂಬ ಹತ್ತಿರದಿಂದ ನೋಡಿದ್ದೀರಿ. ಅವರ ಪ್ರೀತಿ ಮತ್ತು ಮೌಲ್ಯಗಳನ್ನು ಕಂಡಿದ್ದೀರಿ. ಎಂದು ಹೇಳಿದ್ದುಕೆ ರಾಮ್ ಅವರು ಈ ಕಲ್ಪನೆಯನ್ನು ತೆರೆಯ ಮೇಲೆ ತರಲು ನನ್ನಿಂದಾದ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಕೇಳಿ ಅಪ್ಪು ಅಭಿಮಾನಿಗಳು ನಮ್ಮ ರಾಜಕುಮಾರ ಅಪ್ಪು ಅವರ ಜೀವನ ಚರಿತ್ರೆಯನ್ನು ಸಿನಿಮಾ ರೂಪದಲ್ಲಿ ಅಭಿಮಾನಿಗಳಿಗೆ ನೋಡುವಾಸೆ ನೀವು ಸಮಯ ತೆಗೆದುಕೊಂಡು ಅದ್ಭುತವಾದ ಸಿನಿಮಾ ಮಾಡಿ. ಇನ್ನೊಬ್ಬ ಅಭಿಮಾನಿ ನಿರ್ದೇಶಕರೇ ಒಬ್ಬ ಅಪ್ಪಟ ಅಪ್ಪು ಸರ್ ಅಭಿಮಾನಿಯಾಗಿ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಅಪ್ಪು ಸರ್‌ಗಾಗಿ ಅವರ ಹುಟ್ಟುಹಬ್ಬದ ದಿನದಂದು ಒಂದು ಒಳ್ಳೆಯ ಹಾಡನ್ನು ತಯಾರಿಸಿ. ಅದನ್ನು ಅಪ್ಪು ಸರ್ ಅವರಿಗೆ ಅರ್ಪಿಸೋಣ ಎಂದು ಕೇಳಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
