fbpx
ರಾಜಕೀಯ

ಕೋಟಿ ಕೋಟಿ ಒಡೆಯ ಸೂರಜ್: ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಅವರ ಆಸ್ತಿ ಎಷ್ಟು ಗೊತ್ತ?

ವಿಧಾನಪರಿಷತ್ ಚುನಾವಣೆಗೆ ವಿವಿಧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು.10 ಸ್ಥಾನಗಳಿಗೆ ಪರಿಷತ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಅದರಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್​ನಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹಾಗೂ ಹೆಚ್​ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ಅವರ ಆಸ್ತಿ ವಿವರಗಳು ಲಭ್ಯವಾಗಿವೆ.

ಇನ್ನು ಡಾ. ಸೂರಜ್ ರೇವಣ್ಣ ಅವರ ಆಸ್ತಿ ನೋಡುವುದಾದರೆ ಸ್ಥಿರಾಸ್ತಿ 3,53,16,463 ರೂಪಾಯಿ ಆಗಿದೆ. ಚರಾಸ್ತಿ 61 ಕೋಟಿ 68 ಲಕ್ಷದ 22 ಸಾವಿರ 761 ರೂ. ಆಗಿದೆ. ಸೂರಜ್ ಹಾಸನದ ಪರಿಷತ್ ಚುನಾವಣೆ ಜೆಡಿಎಸ್ ಅಭ್ಯರ್ಥಿ ಆಗಿದ್ದಾರೆ. ಹೆಚ್​.ಡಿ. ದೇವೇಗೌಡ, ಅಜ್ಜಿ ಚೆನ್ನಮ್ಮ, ಅತ್ತೆಯರು, ಅಪ್ಪ, ಅಮ್ಮನಿಂದ ಪಡೆದಿರುವ ಸಾಲ 14,97,74,989 ರೂ. ಆಗಿದೆ.

ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಬಳಿ 1 ಕೆಜಿ ಚಿನ್ನಾಭರಣ ಇದೆ. 18 ಕೆಜಿ ಬೆಳ್ಳಿ, 1 ಟ್ರ್ಯಾಕ್ಟರ್, 36 ಹಸು, 6 ಎತ್ತು, 8 ಎಮ್ಮೆ ಇದೆ ಎಂದು ಹೇಳಲಾಗಿದೆ. ಹಾಗೆ ₹13,53,97,612 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, 14,07,85,087 ರು. ಮೌಲ್ಯದ ವಾಣಿಜ್ಯ ಕಟ್ಟಡಗಳಿವೆ. ಸೂರಜ್ ರೇವಣ್ಣ ಕೋಟಿ ಕೋಟಿ ರೂಪಾಯಿ ಆಸ್ತಿ ಒಡೆಯರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top