fbpx
ಸಮಾಚಾರ

“ಹಣಕ್ಕಾಗಿ ಇಂಥಾ ಕೆಲಸ ಮಾಡೋದು ಸರಿಯಲ್ಲ” ನಟಿ ಸಮಂತಾ ವಿರುದ್ಧ ಮುಗಿಬಿದ್ದ ಫ್ಯಾನ್ಸ್

ದಕ್ಷಿಣ ಭಾರತದ ಖ್ಯಾತ ನಟಿ, ಮುದ್ದು ಮುಖದ ಚೆಲುವೆ ಸಮಂತಾ ಇತ್ತೀಚಿಗೆ ಸಿನಿಮಾ ವಿಚಾರಗಳು ಹೊರತುಪಡಿಸಿ ಅವರ ದಾಂಪತ್ಯ ಜೀವನದ ಕಾರಣಕ್ಕೆ ಸುದ್ದಿಯಾಗಿದ್ದೆ ಹೆಚ್ಚು. ಪತಿ ನಾಗಚೈತನ್ಯ ಜೊತೆಗಿನ ಸಾಂಸಾರಿಕ ಜೀವನವನ್ನು ವಿಚ್ಛೇದನ ಪಡೆಯುವ ಮೂಲಕ ಮುರಿದುಕೊಂಡಿದ್ದು ವ್ಯಾಪಕವಾಗಿ ಸುದ್ದಿಯಾಗಿತ್ತು.

ವಿಚ್ಛೇದನದ ನಂತರ ಈವರೆಗೆ ಯಾವುದೇ ತೆಲುಗು ಚಿತ್ರಗಳನ್ನ ಒಪ್ಪಿಕೊಳ್ಳದ ಸಮಂತಾ ಕೇವಲ ಹಿಂದಿ ಮತ್ತು ತಮಿಳು ಚಿತ್ರರಂಗದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಮೂರು ತಮಿಳು ಚಿತ್ರಗಳು ಸೇರಿದಂತೆ ಕೆಲವು ಹಿಂದಿ ಪ್ರಾಜೆಕ್ಟ್ ಗಳಿಗೆ ಮಾತ್ರ ಸಮಂತಾ ಸಹಿ ಮಾಡಿದ್ದಾರೆ. ಇದು ಸಹಜವಾಗಿ ಸಮಂತಾ ತೆಲುಗು ಅಭಿಮಾನಿಗಳಿಗೆ ಬೇಸರ ತಂದಿತ್ತು. ಈಗ ಸಮಂತಾ ಮಾಡಿರುವ ಕೆಲಸವೊಂದರ ಕಾರಣ ಅಭಿಮಾನಿಗಳು ನಟಿಯ ವಿರುದ್ಧವೇ ಗರಂ ಆಗಿದ್ದಾರೆ.

 

 

ಹೌದು, ಸಮಂತಾ ತೆಲುಗಿನ ಬಹುನಿರೀಕ್ಷಿತ ”ಪುಷ್ಪ” ಸಿನಿಮಾದ ಐಟಂ ಹಾಡೊಂದರಲ್ಲಿ ಕುಣಿಯೋದು ಪಕ್ಕಾ ಆಗಿದೆ. ದೊಡ್ಡ ಮೊತ್ತದ ಸಂಭಾವನೆ ಪಡೆದು ”ಪುಷ್ಪ” ಸಿನಿಮಾದ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಸಮಂತಾ. ಆದರೆ ಸಮಂತಾ ತೆಲುಗಿನ ಯಾವ ಸಿನಿಮಾಗಳಿಗೂ ಇನ್ನೂ ಒಪ್ಪಿಗೆ ನೀಡಿಲ್ಲ. ”ಪುಷ್ಪ” ಸಿನಿಮಾದ ಐಟಂ ಹಾಡಿಗೆ ಸಮಂತ ಓಕೆ ಅನ್ನೋ ಮೊದಲು ತೆಲುಗಿನ ಖ್ಯಾತ ನಟ ಶರ್ವಾನಂದ್​ ಜೊತೆ ನಟಿಸೊಕೆ ನಿರಾಕರಸಿದ್ದರಂತೆ ಸಮಂತಾ. ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.

ಈ ಸಂಭಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಮಂತಾರನ್ನು ತರಾಟೆಗೆ ತೆಗೆದುಕೊಂಡಿದ್ದು, ಕೇವಲ ದುಡ್ಡಿಗಾಗಿ ಈ ರೀತಿ ಮಾಡಿರುವುದು ಸರಿಯಲ್ಲ,. ನಿಮ್ಮನ್ನು ಬೆಳೆಸಿದ ತೆಲುಗು ಚಿತ್ರರಂಗದಲ್ಲಿ ನೀವು ಹೆಚ್ಚು ಸಿನಿಮಾಗಳನ್ನು ಮಾಡಬೇಕು. ಒಂದು ಐಟಂ ಹಾಡಿನಿಂದ ಬಹು ಬೇಗ ಪ್ರಚಾರ ಮತ್ತು ಹಣವನ್ನು ಸಂಪಾದನೆ ಮಾಡುವ ಯೋಚನೆ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top