fbpx
ಸಮಾಚಾರ

ಕೋರ್ಟ್ ಮ್ಯಾರೇಜ್ ಆಗ್ತಾರೆ ಕತ್ರಿನಾ-ವಿಕ್ಕಿ : ಹಾಗಂದ್ರೇನು? ಕೋರ್ಟ್ ಮ್ಯಾರೇಜ್ ಗೂ ರಿಜಿಸ್ಟರ್ ಮ್ಯಾರೇಜ್ ಗೂ ವ್ಯೆತ್ಯಾಸವೇನು ಗೊತ್ತಾ?

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಡುವಿನ ಲವ್ ಅಫೇರ್ ವಿಚಾರ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಅಂದ್ರೆ, ಕಳೆದ ಒಂದೆರಡು ವರ್ಷಗಳಿಂದ ಕದ್ದುಮುಚ್ಚಿ ಡೇಟಿಂಗ್ ನಡೆಸುತ್ತಿದ್ದ ವಿಚಾರಕ್ಕೆ ಸುದ್ದಿಯಾಗುತ್ತಿದ್ದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಈಗ ಮದುವೆಯಾಗುತ್ತಿದ್ದಾರೆ. ಹಾಗಂತ ಬಾಲಿವುಡ್ ನಾದ್ಯಂತ ಸಿಕ್ಕಾಪಟ್ಟೆ ಗುಸುಗುಸು ಕೇಳಿಸುತ್ತಿದೆ.

ತಮ್ಮ ವಿವಾಹ ಮಹೋತ್ಸವದ ಬಗ್ಗೆ ನಟ ವಿಕ್ಕಿ ಕೌಶಲ್ ಆಗಲಿ, ಕತ್ರಿನಾ ಕೈಫ್ ಆಗಲಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ, ವಿಕ್ಕಿ ಕೌಶಲ್ – ಕತ್ರಿನಾ ಕೈಫ್ ಮದುವೆ ಕುರಿತಾದ ಸಾಕಷ್ಟು ವಿಚಾರಗಳು ಸುದ್ದಿ ಆಗುತ್ತಿವೆ. ಒಂದು ಮೂಲದ ಪ್ರಕಾರ ಹೇಳುವುದುದಾರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಡಿಸೆಂಬರ್ 7 ರಿಂದ 12ನೇ ತಾರೀಖಿನವರೆಗೆ ನಡೆಯಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಕಲ್ಯಾಣ ಜರುಗಲಿದೆ.

ಈ ತಾರಾ ಜೋಡಿ ಸಾಂಪ್ರದಾಯಿಕವಾಗಿ ಮಾತ್ರವಲ್ಲದೆ ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಹೌದು, ತಾರಾ ಜೋಡಿ ಮುಂಬೈನಲ್ಲಿ ‘ಕೋರ್ಟ್ ಮ್ಯಾರೇಜ್’ ಆಗುತ್ತಿದ್ದಾರೆ. ಅಲ್ಲಿಂದ ರಾಜಸ್ಥಾನಕ್ಕೆ ತೆರಳಿ ಅದ್ದೂರಿ ಮದುವೆ ಸಮಾರಂಭ ನಡೆಯಲಿದೆ ಎನ್ನುವುದು ಸದ್ಯದ ಸುದ್ದಿ. ಹಾಗಾದ್ರೆ ಕೋರ್ಟ್ ಮ್ಯಾರೇಜ್ ಅಂದ್ರೆ ಏನು ಅಂತೀರಾ? ಮುಂದೆ ಓದಿ

‘ಕೋರ್ಟ್ ಮ್ಯಾರೇಜ್’ ಮತ್ತು ಮದುವೆ ನೋಂದಣಿಗೂ ವ್ಯತ್ಯಾಸವಿದೆ. ಕೋರ್ಟ್ ಮ್ಯಾರೇಜ್ ಎಂದರೆ ಸಂಪ್ರದಾಯ ಬದ್ಧವಾಗಿಯೇ ಮದುವೆ ನಡೆಯುತ್ತದೆ. ಮದುವೆಯಲ್ಲಿ ಅಧಿಕಾರಿಗಳು ಹಾಜರಿರುತ್ತಾರೆ. ಸಾಕ್ಷಿಗಳಿಂದ ಸಹಿ ಮಾಡಿಸಿಕೊಳ್ಳಲಾಗುತ್ತದೆ. ಆದರೆ ರಿಜಿಸ್ಟರ್ ಮದುವೆಯಲ್ಲಿ ವಧು ವರರು ನೋಂದಣಿ ಕಚೇರಿಗೆ ಭೇಟಿ ನೀಡಿ ಸಂಭಂದಪಟ್ಟ ದಾಖಲೆಗಳಿಗೆ ಸಹಿ ಮಾಡುವ ಮೂಲಕ ಮದುವೆಯಾಗುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top