fbpx
ಸಿನಿಮಾ

ನಟಿ ಶುಭ ಪೂಂಜಾಗೆ ಕೂಡಿ ಬಂತು ಕಂಕಣ ಭಾಗ್ಯ: ಮದುವೆಗೆ ಮೂಹರ್ತ ಫಿಕ್ಸ್.

ಮೊಗ್ಗಿನ ಮನಸ್ಸು ಚೆಲುವೆ ಶುಭಾ ಪೂಂಜಾ ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಗುರುತಿಸಿಕೊಂಡಿರುವ ನಟಿ ಶುಭ ಪೂಂಜಾ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಪ್ರೀತಿಸಿದ ಹುಡುಗನ ಜೊತೆ ನೂತನ ಜೀವನಕ್ಕೆ ಕಾಲಿಡುತ್ತಿದ್ದಾರೆ.‌

ಜಾಕ್ಪಾಟ್ ಸಿನಿಮಾ ಮೂಲಕ ಕನ್ನಡ ಸಿನಿಮಾ‌ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ ಶುಭಾ ಪೂಂಜಾ ಹೆಸರು ಮಾಡಿದ್ದು ಮಾತ್ರ ಮೊಗ್ಗಿನ ಮನಸ್ಸು ಸಿನಿಮಾ ಮೂಲಕವೇ ಮೊಗ್ಗಿನ ಮನಸ್ಸು ಸಿನಿಮಾ ಅಷ್ಟು ಪ್ರಖ್ಯಾತಿ ತಂದುಕೊಟ್ಟಿತ್ತು. ಆನಂತರ ಕನ್ನಡದಲ್ಲಿ 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಶುಭಾ ಬಿಗ್ ಬಾಸ್ ಸ್ಪರ್ಧೆಗೆ ಹೋಗಬೇಕಾಗಿದ್ದ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು. ಆದರೆ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ತಮ್ಮ ಗೆಳೆಯ ಸುಮಂತ್ ಮಹಾಬಲ ಅವರ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ. ಹೌದು ಸುಮಂತ್ ಹಾಗೂ ಶುಭ ಪೂಂಜಾ ಪ್ರೀತಿಸುತ್ತಿದ್ದಾರೆ. ಶುಭಾ ಪೂಂಜಾ ಅವರ ನೇರ ನಡವಳಿಕೆ ಇಷ್ಟವಾಯಿತು ಎನ್ನುತ್ತಾರೆ ಸುಮಂತ್. ಇವರು ಮೂಲತಃ ಮಂಗಳೂರು ಮೂಲದವರಾಗಿದ್ದು ಜೈ ಕರ್ನಾಟಕ ಸಂಘಟನೆಯ ಸೌತ್ ವಿಂಗ್ ನ ಅಧ್ಯಕ್ಷರೂ ಹೌದು ಮುತ್ತಪ್ಪ ರೈ ಅವರ ಮಗನ ಆಪ್ತನಾಗಿರುವ ಸುಮಂತ್ ಜೈ ಕರ್ನಾಟಕದ ಜೊತೆಗೆ ತಮ್ಮದೇ ಆದ ಉದ್ಯಮವನ್ನು ಸಹ ಮಾಡಿಕೊಂಡಿದ್ದಾರೆ.

ಈಗ ಶುಭ ಪೂಂಜಾ ಅವರ ಮದುವೆಯೂ ಸಹ ನಿಶ್ಚಯವಾಗಿದೆ ಪ್ರೀತಿಸುತ್ತಿದ್ದ ಇವರಿಬ್ಬರ ಕಲ್ಯಾಣಕ್ಕೆ ಮನೆಯವರು ಒಪ್ಪಿಗೆ ಸೂಚಿಸಿದ್ದು. ಈ ವರ್ಷದ ಅಂತ್ಯದಲ್ಲಿ ಮದುವೆ ಸಮಾರಂಭ ನೆರವೇರಲಿದೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top