fbpx
ಸಿನಿಮಾ

ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್!

ಕರ್ನಾಟಕ ರತ್ನ ಎಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ 23 ದಿನಗಳೇ ಕಳೆದಿದ್ದರೂ ಇಂದಿಗೂ ಅವರು ಇಲ್ಲೇ ಎಲ್ಲೋ ಇದ್ದಾರೆ ಅನ್ನಿಸುತ್ತಿದೆ. ಅಪ್ಪು ಅವರು ಇಲ್ಲ ಎನ್ನುವುದನ್ನ ಸಂಪೂರ್ಣವಾಗಿ ಒಪ್ಪಿಕೊಳ್ಳೋದಕ್ಕೆ ಈಗಲೂ ಸಾಧ್ಯವಾಗುತ್ತ ಇಲ್ಲ.

ಇದರ ಜೊತೆಗೆ ಅವರ ಪತ್ನಿ ಅಶ್ವಿನಿ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಅಪ್ಪು ಮತ್ತು ಅಶ್ವಿನಿ ಅವರದ್ದು ಪ್ರೇಮ ವಿವಾಹ. ಒಬ್ಬರನ್ನೊಬ್ಬರು ಬಹಳಷ್ಟು ಪ್ರೀತಿಸುತ್ತಿದ್ದರು. ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿರುತ್ತಿದ್ದರು. ಅಪ್ಪು ಅವರು ಮಾಡಿರುವ ಎಲ್ಲಾ ಒಳ್ಳೆಯ ಕೆಲಸಗಳು ಮತ್ತು ಅಪ್ಪು ಅವರ ಎಲ್ಲಾ ಕನಸುಗಳ ಬಗ್ಗೆ ಗೊತ್ತಿತು ಅಶ್ವಿನಿ ಅವರಿಗೆ ಮಾತ್ರ.

ಅಪ್ಪು ಅವರದ್ದು ಮತ್ತೊಂದು ದೊಡ್ಡ ಕನಸಿತ್ತು ಅದು ಗಂಧದ ಗುಡಿ. ಇದು ಬಹಳ ಸ್ಪೆಷಲ್ ಆದ ಡಾಕ್ಯುಮೆಂಟರಿ. ಕರ್ನಾಟಕದ ಹಲವು ಜಾಗಗಳಲ್ಲಿ, ಅಲ್ಲಿನ ಪರಿಸರ, ಕಾಡು ಮೇಡು, ಸಮುದ್ರ ಎಲ್ಲವನ್ನು ಚಿತ್ರೀಕರಿಸಲಾಗಿದೆ. ನಮ್ಮ ರಾಜ್ಯದ ಪ್ರಕೃತಿಯ ಸೊಬಗು ಎಲ್ಲಾ ಕಡೆ ಹರಡಬೇಕು ಎಂದು ಮಾಡಿದ್ದ ಪ್ರಯತ್ನವಿದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಗಂಧದಗುಡಿ ಡಾಕ್ಯುಮೆಂಟರಿ ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆ ಆಗಬೇಕಿತ್ತು. ಆದರೆ ಅಷ್ಟರ ಒಳಗೆ ಅಪ್ಪು ಇನ್ನಿಲ್ಲವಾದರು. ಆಗಿನಿಂದ ಅಭಿಮಾನಿಗಳು ಈ ಡಾಕ್ಯುಮೆಂಟರಿ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಹಾಗೆಯೇ ಪಿ.ಆರ್.ಕೆ ಪ್ರೊಡಕ್ಷನ್ಸ್ ಕೆಲಸಗಳು ಪುನರಾರಂಭ ಆಗುವ ಬಗ್ಗೆ ಸಹ ಮಾಹಿತಿ ನೀಡಿದರು. ಇಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಗಂಧದ ಗುಡಿ ಡಾಕ್ಯುಮೆಂಟರಿ ಬಗ್ಗೆ ಅಭಿಮಾನಿಗಳೆಲ್ಲರಿಗೂ ಒಂದು ಗುಡ್ ನ್ಯೂಸ್ ನೀಡಿದ್ದಾರೆ.

ಅಪ್ಪು ಅವರ ಕನಸೊಂದು 01/11/2021 ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ವಿರಾಮವಷ್ಟೇ. ಅದನ್ನು ಅವರಿಷ್ಠದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಪ್ರೀತಿ ಮತ್ತು ಸಹಕಾರಕ್ಕೆ ನಾವು ಆಭಾರಿ ಯಾಗಿದ್ದೇನೆ ಎಂದು ಹೇಳಿ ಆದಷ್ಟು ಬೇಗ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆ ಆಗುತ್ತದೆ ಎಂದು ತಿಳಿಸಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top