fbpx
ಸಮಾಚಾರ

ಇನ್ಮುಂದೆ ಟಿಕೆಟ್ ದರ ನಿಗದಿ ಮಾಡೋದು ಸರ್ಕಾರ!

ಸಿನಿಮಾ ನೋಡಬೇಕು ಅಂದರೆ ಥಿಯೇಟರ್‌ಗೆ ಹೋಗಿ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿ ಮಾಡುತ್ತೇವೆ. ಕೆಲವರು ಆನ್‌ಲೈನ್ ವೆಬ್‌ಸೈಟ್ ಮೂಲಕ ಸಿನಿಮಾ ಟಿಕೆಟ್ ಬುಕ್ ಮಾಡುತ್ತಾರೆ. ಇದು ಹಲವು ವರ್ಷಗಳಿಂದ ನೆಡೆಯುತಲೇ ಇದೆ. ಸರ್ಕಾರದ ಆನ್‌ಲೈನ್ ಪ್ಲಾಟ್‌ಫಾರಂ ಮೂಲಕವೇ ಸಿನಿಮಾ ಟಿಕೆಟ್ ಮಾರಾಟ ಮಾಡಲಾಗುತ್ತದೆ.

ಅಂದ್ಹಾಗೆ ಈ ಹೊಸ ನೀತಿಗೆ ಸಿನಿಮಾರಂಗದಲ್ಲಿ ವಿರೋಧ ವ್ಯಕ್ತವಾಗುತ್ತಿದೆ ನಿಯಮ ಜಾರಿಗೆ ಬಂದಿರೋದು ನಮ್ಮ ಕರ್ನಾಟಕದಲ್ಲಿ ಅಲ್ಲ. ಬದಲಾಗಿ ನೆರೆಯ ಆಂಧ್ರಪ್ರದೇಶದಲ್ಲಿ  ಸರ್ಕಾರ  ಇಂತಹದೊಂದು ನಿಯಮ ಜಾರಿಗೆ ತರುತ್ತಿದ್ದು ಇದಕ್ಕೆ ಎಲ್ಲೆಡೆಯಿಂದ ಬಾರೀ ವಿರೋಧ ವ್ಯಕ್ತವಾಗ್ತಿದೆ. ಯಾಕಂದ್ರೆ ಸರ್ಕಾರ ಕೇವಲ ಟಿಕೆಟ್‌ಗಳನ್ನಷ್ಟೇ ಮಾರಾಟ ಮಾಡುವುದಿಲ್ಲ. ಬದಲಾಗಿ ಎಷ್ಟು ಶೋಗಳನ್ನು ಪ್ರದರ್ಶನ ಮಾಡಬೇಕು. ಒಂದು ಟಿಕೆಟ್‌ಗೆ ಎಷ್ಟು ಹಣ ನಿಗದಿ ಮಾಡಬೇಕು ಅನ್ನುವುದನ್ನೂ ಸರ್ಕಾರವೇ ನಿರ್ಧರಿಸಲಿದೆ.

ಇಂದು ಈ  ಹೊಸ ನೀತಿಯನ್ನು ವಿಧಾನ ಪರಿಷತ್‌ನಲ್ಲಿ ಈ ಹೊಸ ಮಸೂದೆಯನ್ನು ಸರ್ಕಾರ ಪ್ರಸ್ತಾಪಿಸಲಿದೆ. ಈ ಮೂಲಕ ಆಂಧ್ರದಲ್ಲಿ ಸಿನಿಮಾ ಟಿಕೆಟ್ ಮಾರಾಟ ಹಕ್ಕು ಸರ್ಕಾರದ ಪಾಲಾಗಲಿದೆ. ಆಂಧ್ರ ಪ್ರದೇಶದ ಸಿನಿಮಾ ರೆಗ್ಯೂಲೇಷನ್ ಕಾಯ್ದೆ ಅಡಿಯಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top