fbpx
ರಾಜಕೀಯ

ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಹೆಸರೇಳಿ ರಾಜ್ಯದ ಜನತೆಗೆ ಸಚಿವರು ಕೊಟ್ಟ ಭರವಸೆ​!

ರಾಜಸ್ಥಾನ ಸಚಿವ ಸಂಪುಟದಲ್ಲಿ ಇತ್ತೀಚೆಗಷ್ಟೇ ಸ್ಥಾನ ಪಡೆದ ರಾಜೇಂದ್ರ ಸಿಂಗ್​ ಗೌಡ ಅವರು ನೀಡಿರುವ ಹೇಳಿಕೆಯೊಂದು ಸೋಶಿಯಲ್ ಮೀಡಿಯಾ ದಲ್ಲಿ ಭಾರೀ ವೈರಲ್​ ಆಗಿದೆ. ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಾಜೇಂದ್ರ ಸಿಂಗ್​ ಗೌಡ ಅವರು ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಅವರ ಕೆನ್ನೆಯಷ್ಟು ಸೊಗಸಾದ ರಸ್ತೆಗಳನ್ನು ಮಾಡಿಸುತ್ತೇನೆಂದು ಭರವಸೆ ನೀಡಿದ್ದಾರೆ.

ಇನ್ನು ರಾಜಕಾರಣಿಗಳ ರಸ್ತೆಗಳನ್ನು ಸೆಲೆಬ್ರಿಟಿಗಳ ಕೆನ್ನಗೆ ಹೋಲಿಸಿ ಮಾತನಾಡುವುದು ಇದೇ ಮೊದಲಸತಿ ಏನ್ ಹೇಳಿಲ್ಲ. 2015ರಲ್ಲೂ ಕೂಡ ಆರ್​ಜೆಡಿ ನಾಯಕ ಲಾಲು ಪ್ರಸಾದ್​ ಯಾದವ್​ ಹೇಮಾಮಾಲಿನಿ ಕೆನ್ನೆಯಂತ ನಯವಾದ ರಸ್ತೆಗಳನ್ನು ಮಾಡಿಸುವ ಭರವಸೆ ನೀಡಿದ್ದರು. ಹಾಗೆಯೇ ಮಧ್ಯಪ್ರದೇಶದ ಕಾನೂನು ಸಚಿವ ಪಿ.ಸಿ. ಶರ್ಮಾ ಕೂಡ 2019ರಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದರು. ರಾಜ್ಯದ ಗುಂಡಿಯುಕ್ತ ರಸ್ತೆಗಳು ಕನಸಿನ ಹುಡುಗಿಯ ಕೆನ್ನೆಯ ರೀತಿ ಬದಲಾಗಲಿದೆ ಎಂದು ಭರವಸೆ ನೀಡಿದ್ದರು. 2013ರಲ್ಲಿ ಉತ್ತರ ಪ್ರದೇಶದ ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಸಚಿವ ರಾಜಾರಾಮ್​ ಪಾಂಡೆ ಮಾತನಾಡಿ ಪ್ರತಾಪಗಢ ಜಿಲ್ಲೆಯಲ್ಲಿರುವ ರಸ್ತೆಗಳನ್ನು ಹೇಮಾಮಾಲಿನಿ ಮತ್ತು ಮಾಧುರಿ ದೀಕ್ಷಿತ್​ ಗಲ್ಲದಂತೆ ಸೊಗಸಾಗಿ ಮಾಡಲಾಗುವುದು ಎಂದಿದ್ದರು.

ಆದರೆ ರಾಜಕಾರಣಿಗಳು ನೀಡಿದ ಭರವಸೆ ಇನ್ನ ಕೂಡ ನಿಜವಾಗಿಲ್ಲ ಇಂದಿಗೂ ಭರವಸೆ ಆಗಿಯೇ ಉಳಿದಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top