fbpx
ಸಮಾಚಾರ

“ಹಂಸಲೇಖ ಹೇಳಿದ್ದರಲ್ಲಿ ತಪ್ಪೇನು ಇಲ್ಲ, ಆದ್ರೆ ಸಂವಿಧಾನ ವಿರೋಧಿ ಮನುವಾದಿಗಳು ಇದನ್ನು ವಿರೋಧಿಸುತ್ತಾರೆ” ಪ್ರಿಯಾಂಕ್ ಖರ್ಗೆ

ಅಸ್ಪೃಶ್ಯತೆ ಮತ್ತು ಅಸಮಾನತೆ ಬಗ್ಗೆ ನಾದ ಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖ ಅವರು ಆಡಿರುವ ಮಾತು ಈಗ ವಿವಾದದ ಕಿಡಿ ಹೊತ್ತಿಸಿದೆ. “ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ..? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ..? ಲಿವರ್ ಕೊಟ್ರೆ ತಿಂತಾರಾ..? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ” ಎಂದು ಹೇಳಿದ್ದರು.

ವಿರೋಧಗಳು ವ್ಯಕ್ತವಾದಾಗ ಕ್ಷಮೆಯಾಚಿಸಿದ್ದರು. ಆದರೂ ಅವರ ಮೇಲೆ ದಾಳಿಗಳು ಮುಂದುವರಿದ ಬಳಿಕ ರಾಜಕೀಯ ನಾಯಕರು ಹಂಸಲೇಖರ ಪರ ದನಿ ಎತ್ತುತ್ತಿದ್ದು, ಈಗ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆಯವರು, “ಹಂಸಲೇಖ ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಕೆಲವು ಮನುವಾದಿಗಳು ಸಂವಿಧಾನದ ವಿರುದ್ಧವಿದ್ದಾರೆ. ಅವರು ವಿರೋಧ ಮಾಡಿಯೇ ಮಾಡುತ್ತಾರೆ. ಎಲ್ಲಿಯವರೆಗೆ ಮನುವಾದಿ ಸಂಸ್ಕೃತಿ ಇರುತ್ತದೋ ಅಲ್ಲಿಯವರೆಗೆ ವಿರೋಧ ಇರುತ್ತದೆ” ಎಂದು ತಿಳಿಸಿದ್ದಾರೆ.

ಹಂಸಲೇಖ ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಕೆಲವು ಮನುವಾದಿಗಳು ವಿರೋಧ ಮಾಡುತ್ತಿದ್ದಾರೆ ಅಷ್ಟೇ. ಈ ಆಹಾರ ತಗೊಳ್ಳಿ, ಈ ಆಹಾರ ಬೇಡ ಅಂತ ನಾನು ಹೇಳೋಕೆ ಆಗುತ್ತಾ? ಮಾಂಸ ತಿನ್ನೋದು ತಪ್ಪಾ? ಎಂದರು. ಕೆಲವರು ಒಪ್ಪಬಹುದು, ಕೆಲವರು ಒಪ್ಪದೇ ಇರಬಹುದು. ಬಿಜೆಪಿಯವರು ದಲಿತರ ಮನೆಗೆ ಹೋಗಿ ಹೊಟೇಲ್ ಊಟ ತರಿಸಿ ತಿನ್ನಲ್ವಾ? ಎಂದು ಪ್ರಶ್ನಿಸಿದರು.

“ಬಿಜೆಪಿಯವರು ದಲಿತರ ಮನೆಗೆ ಹೋಗಿ ಹೋಟೆಲ್ ನಿಂದ ಊಟ ತರಿಸಿ ತಿನ್ನುತ್ತಾರೆ. ಅವರು ಟೂರಿಸಂ ಪ್ಯಾಕೇಜ್ ಮಾಡಿದ್ದಾರಾ? ಅವರು ದಲಿತರ ಮನೆಗೆ ಹೋಗಿ ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ದಲಿತರ ಮನೆಗೆ ಹೋದರೂ ವೆಜ್ ಊಟವನ್ನೇ ತರಿಸಿ ತಿನ್ನುತ್ತಾರೆ. ಬಿಜೆಪಿಯವರು ದಲಿತರು ಮತ್ತು ಹಿಂದುಳಿದವರ ಪರವಾಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top