fbpx
ಸಮಾಚಾರ

ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ.

ಮಕ್ಕಳು ಏನಾದರೂ ತಪ್ಪು ಮಾಡಿ ಸಿಕ್ಕಿಬಿದ್ದರೆ ತಂದೆ-ತಾಯಿ ತಲೆ ತಗ್ಗಿಸುವಂತಹ ವಾತಾವರಣ ನಿರ್ಮಾಣ ಆಗುತ್ತದೆ. ಆದರೆ ಡ್ರಗ್ಸ್​ ಪ್ರಕರಣದ ಆರೋಪಿ ಅರ್ಬಾಜ್​​ ಮರ್ಚೆಂಟ್​ ಅವರ ತಂದೆಗೆ ಇದೇನೋ ಹೆಮ್ಮೆ ತರುವಂತಹ ಕೃತ್ಯದ ರೀತಿ ಕಾಣಿಸುತ್ತಿದೆ. ಮುಂಬೈ ಡ್ರಗ್ಸ್​ ಕೇಸ್ ಸಂಬಂಧಿಸಿದಂತೆ ವಿಚಾರಣೆ ಮುಂದುವರಿದಿದೆ. ಶಾರುಖ್​ ಖಾನ್ ಪುತ್ರ ಆರ್ಯನ್​ ಖಾನ್ ಸೇರಿದಂತೆ ಅನೇಕ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಕೋರ್ಟ್​ ಆದೇಶದಂತೆ ಅವರೆಲ್ಲರೂ ಎನ್​ಸಿಬಿ ಕಚೇರಿಗೆ ಬಂದು ಸಹಿ ಹಾಕಬೇಕು.

ಹಾಗಾಗಿ ಡ್ರಗ್ಸ್​ ಪ್ರಕರಣದ ಆರೋಪಿ ಅರ್ಬಾಜ್​​ ಮರ್ಚೆಂಟ್​ ಕೂಡ ಶುಕ್ರವಾರ ನ.26 ಎನ್​ಸಿಬಿ ಕಚೇರಿಗೆ ಬಂದಿದ್ದರು. ಆ ವೇಳೆ ಅವರ ತಂದೆ ನಡೆದುಕೊಂಡ ರೀತಿ ಸಿಕ್ಕಾಪಟ್ಟೆ ವಿಚಿತ್ರವಾಗಿತ್ತು. ಮಾಧ್ಯಮಗಳಿಗೆ ಪೋಸ್​ ನೀಡುವಂತೆ ಮಗನಿಗೆ ಅವರು ಒತ್ತಾಯಿಸಿದರು. ಅಲ್ಲದೇ ತಾವು ಕೂಡ ಖುಷಿಖುಷಿಯಿಂದಲೇ ಕ್ಯಾಮೆರಾಗಳಿಗೆ ಪೋಸ್​ ನೀಡಿದರು.

ಹೇಗಿದೆ ಆರ್ಯನ್​ ಖಾನ್​ ಪರಿಸ್ಥಿತಿ ಹುಟ್ಟಿನಿಂದಲೂ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರು ಆರ್ಯನ್​ ಖಾನ್​. ಹಾಗಾಗಿ ಅವರಿಗೆ ಜೈಲಿನಲ್ಲಿ ಹೊಂದಿಕೊಳ್ಳಲು ಕಷ್ಟ ಆಗಿತ್ತು. ಜೈಲಿನ ಕಠಿಣ ವಾತಾವರಣವು ಅವರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕೋರ್ಟ್​ ತೀರ್ಪು ನೀಡುವುದಕ್ಕೂ ಮುನ್ನವೇ ಒಂದು ವರ್ಗದ ಜನರು ಆರ್ಯನ್​ ಖಾನ್​ರನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಆರ್ಯನ್​ ಮನಸ್ಸಿಗೆ ಘಾಸಿ ಆಗಿದೆಯಂತೆ. ಆದ್ದರಿಂದ ಮಗನಿಗೆ ಆಪ್ತ ಸಮಾಲೋಚನೆ ಕೊಡಿಸಲು ಗೌರಿ ಖಾನ್​ ನಿರ್ಧರಿಸಿದ್ದಾರೆ. ಪುತ್ರನ ಮಾನಸಿಕ ಆರೋಗ್ಯದ ಬಗ್ಗೆ ಅವರು ಕಾಳಜಿ ವಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top