fbpx
ಐಪಿಎಲ್

ರೆಡಿಯಾಯ್ತು ಐಪಿಎಲ್ ತಂಡಗಳ ರಿಟೆನ್ಶನ್ ಲಿಸ್ಟ್: ಇಲ್ಲಿದೆ RCB ಉಳಿಸಿಕೊಂಡ ಆಟಗಾರರ ಪಟ್ಟಿ.

ಮುಂದಿನ ಆವೃತ್ತಿಯ ಐಪಿಎಲ್ ಗೆ ಬಿಸಿಸಿಐ ಸಿದ್ದತೆ ಆರಂಭಿಸಿದೆ. ಮುಂದಿನ ಆವೃತ್ತಿಯಿಂದ ಎರಡು ಹೊಸ ತಂಡಗಳು ಸೇರ್ಪಡೆಯಾಗುವ ಕಾರಣದಿಂದ ಈ ಬಾರಿ ಮೆಗಾ ಹರಾಜು ನಡೆಯಲಿದೆ. ಪ್ರತಿ ಫ್ರಾಂಚೈಸಿಗೂ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ರಿಟೆನ್ಶನ್ ಅವಕಾಶ ನೀಡಲಾಗಿದೆ. ನವೆಂಬರ್ 30ರೊಳಗೆ ಈ ಆಟಗಾರರ ಪಟ್ಟಿಯನ್ನು ನೀಡಲು ಬಿಸಿಸಿಐ ಹೇಳಿದೆ.

ಆರ್ ಸಿಬಿ: ಕಳೆದ ಸೀಸನ್ ನಲ್ಲಿ ಕಪ್ ಗೆಲ್ಲುವ ಭರವಸೆ ಮೂಡಿಸಿದ್ದ ಆರ್ ಸಿಬಿ ಹೊಸತನದ ಹುಡುಕಾಟದಲ್ಲಿದೆ. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿರುವ ಕಾರಣ ಹೊಸ ನಾಯಕನ ಶೋಧದಲ್ಲಿದೆ. ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ತಂಡದಲ್ಲಿ ಉಳಿಯುವುದು ಖಚಿತವಾಗಿದೆ. ಮೂಲಗಳ ಪ್ರಕಾರ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಮತ್ತು ಯುಜಿ ಚಾಹಲ್ ರನ್ನು ಆರ್ ಸಿಬಿ ಉಳಿಸಿಕೊಳ್ಳಲಿದೆ.

ಸಿಎಸ್ ಕೆ: ಹಾಲಿ ಚಾಂಪಿಯನ್ ತಂಡವು ನಾಯಕ ಧೋನಿಯನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ.ಉಳಿದಂತೆ ರವೀಂದ್ರ ಜಡೇಜಾ, ಫಾಫ್ ಡುಪ್ಲೆಸಿಸ್ ಉಳಿಸಿಕೊಳ್ಳಲಿದ್ದು ಋತುರಾಜ್ ಗಾಯಕ್ವಾಡ್ ಅಥವಾ ಮೋಯಿನ್ ಅಲಿ ಇಬ್ಬರಲ್ಲಿ ಒಬ್ಬರನ್ನು ಸಿಎಸ್ ಕೆ ರಿಟೆನ್ಶನ್ ಮಾಡಲಿದೆ.

ಐಪಿಎಲ್ ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ಈ ಬಾರಿ ನಾಯಕ ರೋಹಿತ್ ಶರ್ಮಾ, ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಕೈರನ್ ಪೊಲಾರ್ಡ್ ರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಇಶಾನ್ ಕಿಶಾನ್ ಅಥವಾ ಸೂರ್ಯಕುಮಾರ್ ಯಾದವ್ ರನ್ನು ರಿಟೆನ್ಶನ್ ಮಾಡಿಕೊಳ್ಳಲಿದೆ. ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯರನ್ನು ಕೈಬಿಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್: ಡಿಸಿ ತಂಡವು ಅಶ್ವಿನ್ ಮತ್ತು ಅಯ್ಯರ್ ರನ್ನು ಬಿಡುವುದು ಖಚಿತವಾಗಿದೆ. ಮೂಲಗಳ ಪ್ರಕಾರ ಡಿಸಿ ಫ್ರಾಂಚೈಸಿ ನಾಲ್ಕು ಆಟಗಾರರನ್ನು ರಿಟೆನ್ಶನ್ ಮಾಡಲಿದ್ದು, ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ ಈ ಆಟಗಾರರು.

ಮುಂಬೈ: ಐಪಿಎಲ್ ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ಈ ಬಾರಿ ನಾಯಕ ರೋಹಿತ್ ಶರ್ಮಾ, ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಕೈರನ್ ಪೊಲಾರ್ಡ್ ರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಇಶಾನ್ ಕಿಶಾನ್ ಅಥವಾ ಸೂರ್ಯಕುಮಾರ್ ಯಾದವ್ ರನ್ನು ರಿಟೆನ್ಶನ್ ಮಾಡಿಕೊಳ್ಳಲಿದೆ. ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯರನ್ನು ಕೈಬಿಡಲಿದೆ.

ಪಂಜಾಬ್ ಕಿಂಗ್ಸ್: ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್.ರಾಹುಲ್ ಅವರು ತಂಡ ತೊರೆಯವುದು ಬಹುತೇಕ ಖಚಿತವಾಗಿದೆ.

ಕೆಕೆಆರ್: ದಿನೇಶ್ ಕಾರ್ತಿಕ್ ರನ್ನು ಕೂಡಾ ರಿಟೆನ್ಶನ್ ಮಾಡಲಾಗುವುದಿಲ್ಲ ಎನ್ನಲಾಗಿದೆ. ಯುವ ಆಟಗಾರ ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ ರಿಟೆನ್ಶನ್ ಆಗಲಿದ್ದು, ಪ್ಯಾಟ್ ಕಮಿನ್ಸ್ ಅವರು ಲಭ್ಯವಿದ್ದರೆ ರಿಟೈನ್ ಮಾಡಲಿದ್ದಾರೆ.

ರಾಜಸ್ಥಾನ್: ಈ ಬಾರಿ ನಾಯಕ ಸಂಜು ಸ್ಯಾಮ್ಸನ್ ರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಇಂಗ್ಲೆಂಡ್ ಆಟಗಾರರಾದ ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಜೊತೆ ಫ್ರಾಂಚೈಸಿ ಮಾತುಕತೆ ನಡೆಸಿದ್ದು, ಮುಂದಿನ ಆವೃತ್ತಿಗೆ ಲಭ್ಯರಿದ್ದರೆ ಅವರಿಬ್ಬರನ್ನು ಮಾತ್ರ ಉಳಿಸಿಕೊಳ್ಳಲಿದೆ.

ಹೈದರಾಬಾದ್: ಕಳೆದ ಸೀಸನ್ ನ ಕೊನೆಯ ಸ್ಥಾನಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಹೆಚ್ಚಿನ ರಿಟೆನ್ಶನ್ ಮಾಡುವುದಿಲ್ಲ ಎನ್ನಲಾಗಿದೆ. ಸ್ಪಿನ್ನರ್ ರಶೀದ್ ಖಾನ್ ರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಹಾಗೆಯೇ ಉಳಿದಂತೆ ಕೇನ್ ವಿಲಿಯಮ್ಸನ್ ಹೆಸರು ಸದ್ಯ ಪಟ್ಟಿಯಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top