fbpx
ಸಮಾಚಾರ

“ದಲಿತರ ಕೇರಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದಿದ್ದಕ್ಕೆ, ಬೇಡ ಅಂದಿದ್ರು” ಪೇಜಾವರ ಶ್ರೀ ಬಗ್ಗೆ ಜ್ಞಾನಪ್ರಕಾಶ ಸ್ವಾಮೀಜಿ ಗಂಭೀರ ಆರೋಪ

ನಮ್ಮ ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು. ಒಂದು ಲೋಟ ಮಜ್ಜಿಗೆ ಕುಡಿಯದೇ, ದಲಿತ ಕಾಲನಿಗೆ ಪಾದಯಾತ್ರೆ ಮಾಡೋದು ಬುಟಾಟಿಕೆಯಲ್ವಾ. ಹಂಸಲೇಖರ ಮಾತಿನಲ್ಲಿ ಯಾವುದು ತಪ್ಪಿದೆ ಎಂದು ಫ್ರೀಡಂ ಪಾರ್ಕ್​ನಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಾಗೂ ಸಿನಿಮಾ ಸಾಹಿತಿ ಹಂಸಲೇಖ ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಪೇಜಾವರಶ್ರೀಗಳ ಕುರಿತಾಗಿ ಆಡಿದ ಮಾತುಗಳು ಪರ ವಿರೋಧ ಚರ್ಚೆಗೆ ಕಾರಣ ಆಗಿದ್ದವು. ಬಳಿಕ ಘಟನೆ ಹಂಸಲೇಖ ರನ್ನು ಬೆಂಬಲಿಸಿ ಹಲವು ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಜ್ಞಾನಪ್ರಕಾಶ ಸ್ವಾಮೀಜಿ ಹೀಗೆ ಹೇಳಿಕೆ ನೀಡಿದ್ದಾರೆ.

ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, “ಪೇಜಾವರ ಮಠದ ಸ್ವಾಮೀಜಿಯವರು ನನಗೆ ಬಹಳ ಆತ್ಮೀಯರು. ಅವರು ತೀರಿಕೊಳ್ಳುವ ಮೂರು ತಿಂಗಳ ಹಿಂದೆ ನಮ್ಮನ್ನು ಮೈಸೂರಿನ ಕೃಷ್ಣಧಾಮಕ್ಕೆ ಕರೆದುಕೊಂಡು ಮಾತನಾಡಿಸಿದರು. ಮೈಸೂರಿನ ದಲಿತ ಕೇರಿಗಳಾದ ಅಶೋಕಪುರಂಗೆ, ಗಾಂಧಿನಗರಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೇನೆ, ನೀವೆಲ್ಲ ನಿಂತು ಸಹಕರಿಸಿ ಎಂದರು. ಪೂಜ್ಯ ಪೇಜಾವರ ಸ್ವಾಮೀಜಿಯವರೇ, ನೀವು ನಮ್ಮ ಅಶೋಕಪುರಂಗಾಗಲೀ, ಗಾಂಧಿನಗರಕ್ಕಾಗಿ ಬರಬೇಕಾದರೆ ನಮ್ಮದೊಂದು ಷರತ್ತಿದೆ. ನೀವು ನಮ್ಮ ಮೊಹಲ್ಲಾಕ್ಕೆ ಬರುವುದಾದರೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬರಬೇಕು ಎಂದು ಆಗ್ರಹಿಸಿದೆವು. ಅವರು ಆಗುವುದಿಲ್ಲ ಎಂದರು. ಸಂವಿಧಾನ ಶಿಲ್ಪಿಗೆ ಮಾಲಾರ್ಪಣೆ ಮಾಡುವುದಿಲ್ಲ ಎಂಬುದು ರಾಷ್ಟ್ರದ್ರೋಹ ಅಲ್ಲವಾ?” ಎಂದು ಪ್ರಶ್ನಿಸಿದರು.

“ದನದ ಮಾಂಸ ತಿನ್ನದ ವ್ಯಕ್ತಿ ಬ್ರಾಹ್ಮಣನಾಗಿರಲು ಸಾಧ್ಯವೇ ಇಲ್ಲ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಅವರ ಮೇಲೆಯೂ ಕೇಸು ದಾಖಲಿಸುತ್ತೀರಾ. ಹಂಸಲೇಖ ಅವರಿಗೆ ಕ್ಷಮೆ ಕೇಳಿದ ಬಳಿಕವೂ ಅವರನ್ನು ಅವಹೇಳನ ಮಾಡುವ ಬ್ರಾಹ್ಮಣ್ಯಶಾಹಿಗಳು ದಲಿತ ಸಮುದಾಯದ ಮಗುವೊಂದು ದೇವಸ್ಥಾನಕ್ಕೆ ಹೋದ ಕಾರಣಕ್ಕೆ ಆತನ ಪೋಷಕರಿಗೆ ದಂಡ ವಿಧಿಸಿದ್ದಾರೆ. ಇದಕ್ಕೆ ಯಾರು ಕ್ಷಮೆ ಕೇಳಬೇಕು” ಎಂದು ವಾಗ್ದಾಳಿ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top