fbpx
ಸಮಾಚಾರ

ಕನ್ನಡಿಗರ ಬಳಿ ಎರಡು ವಿಚಾರಗಳ ಬಗ್ಗೆ ಕ್ಷಮೆಕೋರಿದ ನಿರ್ದೇಶಕ ರಾಜಮೌಳಿ

ತೆಲುಗು ಚಿತ್ರರಂಗದ ಸೋಲಿಲ್ಲದ ಸರದಾರ ಎಂದೇ ಹೆಸರುವಾಸಿಯಾಗಿರುವ ‘ಮಗಧೀರ’, ‘ಈಗ’, ‘ಬಾಹುಬಲಿ’, ಅಂತಹ ದೊಡ್ಡ ಯಶಸ್ವಿ ಚಿತ್ರಗಳನ್ನ ಕೊಟ್ಟ ನಿರ್ದೇಶಕ ರಾಜಮೌಳಿ ಈವರೆಗೂ ಮಾಡಿರುವ ಚಿತ್ರಗಳೆಲ್ಲವೂ ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿವೆ.

ಸದ್ಯ ರಾಜಮೌಳಿ ಅವರು ತಮ್ಮ ಮುಂದಿನ RRR ಚಿತ್ರದ ಶೂಟಿಂಗ್ ಮುಗಿಸಿದ್ದು ಬಿಡುಗಡೆ ಕಡೆ ಗಮನ ಹರಿಸಿದ್ದಾರೆ. ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಿರುವ ರಾಜಮೌಳಿ ಇದೆ ಸಂಭಂದ ನೆನ್ನೆ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ರಾಜಮೌಳಿ ಕನ್ನಡಿಗರಲ್ಲಿ ಎರಡು ವಿಚಾರಗಳ ಬಗ್ಗೆ ಕ್ಷಮೆ ಕೇಳಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡದಲ್ಲೇ ಮಾತು ಪ್ರಾರಂಭಿಸಿದ ರಾಜಮೌಳಿ, “ನನ್ನನ್ನು 2 ವಿಷಯಕ್ಕೆ ನೀವು ಕ್ಷಮಿಸ ಬೇಕು “ಎಂದರು.ಒಂದು ನಾನು ಕನ್ನಡ ತಪ್ಪಾಗಿ ಮಾತಾಡಿದರೆ ದಯವಿಟ್ಟು ಕ್ಷಮಿಸಿ, ಇನ್ನೊಂದು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಯಾವುದೇ ಪ್ರೆಸ್ ಮೀಟ್​ಗಳನ್ನು ಮಾಡಿಲ್ಲ. ಅದಕ್ಕೂ ನನ್ನನ್ನು ಕ್ಷಮಿಸಿ” ಎಂದು ತಮ್ಮ ಮಾತನ್ನು ರಾಜಮೌಲಿ ಆರಂಭಿಸಿದರು..

ಮುಂದುವರೆದು ಮಾತನಾಡಿದ ಅವರು ಇಂದು ಪ್ರೆಸ್ ಮೀಟ್ ಮಾಡೋಕೆ ಆಗ್ತಿಲ್ಲ. ಮುಂದಿನ ತಿಂಗಳು ‘ಥ್ರಿಬಲ್​ ಆರ್’​ ಸಿನಿಮಾದ ಪ್ರೀ ರಿಲೀಸ್​ ಇವೆಂಟನ್​ನ್ನು ಬೆಂಗಳೂರಿನಲ್ಲೇ ದೊಡ್ಡದಾಗಿ ಮಾಡುತ್ತೇವೆ.. ಆಗ ನಾನು ಮಾತ್ರ ಅಲ್ಲ ಎ​ನ್​ಟಿಆರ್, ರಾಮ್​ಚರಣ್ ಅಜಯ್​ ದೇವಗನ್​, ಆಲಿಯಾ ಭಟ್​ ಎಲ್ಲರೂ ಬೆಂಗಳೂರಿನಲ್ಲಿ ಸೇರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top