fbpx
ಸಮಾಚಾರ

ಹೆಸರು ಬದಲಾಯಿಸಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್: ಏನದು ಹೊಸ ಹೆಸರು? ಯಾಕೆ? ದೃಶ್ಯ2 ಪೋಸ್ಟರ್ ನಲ್ಲಿ ಇರೋದೇನು?

ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ತಮ್ಮ ವೃತ್ತಿಜೀವನದ ಆರಂಭದಿಂದ ಇಲ್ಲಿಯವರೆಗೂ ‘ವಿ. ರವಿಚಂದ್ರನ್’ ಎಂದು ತಮ್ಮ ಹೆಸರಿಗೆ ಸದ್ಯ ಅಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ ರವಿಮಾಮ. ಅಷ್ಟಕ್ಕೂ ರವಿಚಂದ್ರನ್ ಬದಲಾಯಿಸಿಕೊಂಡಿದ್ದು ಯಾಕೆ? ಹೊಸ ಹೆಸರು ಏನು ಅಂತೀರಾ? ಮುಂದೆ ಓದಿ

ತೆರೆಯ ಮೇಲೆ, ಅವರ ಸಿನಿಮಾ ಪೋಸ್ಟರ್ ಗಳಲ್ಲಿ ಇನ್ನುಮುಂದೆ ‘ಕ್ರೇಜಿಸ್ಟಾರ್ ವಿ ರವಿಚಂದ್ರನ್’ ಎಂಬ ಹೆಸರಿನ ಬದಲಾಗಿ ‘ರವಿಚಂದ್ರ ವಿ.’ ಎಂದು ಬರಲಿದೆ ಏಕೆಂದರೆ ‘ರವಿಚಂದ್ರ ವಿ’ ಎಂದು ಅವರು ಹೆಸರು ಬದಲಾಯಿಸಿಕೊಂಡಿದ್ದಾರೆ ಜ್ಯೋತಿಷಿಯ ಸಲಹೆ ಮೇರೆಗೆ ಈ ಹೆಸರನ್ನೇ ಇಟ್ಟುಕೊಂಡಿದ್ದಾರೆ. ಒಬ್ಬ ಜ್ಯೋತಿಷಿ ಅವರು ನಿಮ್ಮ ಹೆಸರಿನ ಅಕ್ಷರನ್ನು ಹಿಂದೆ ಮುಂದೆ ಮಾಡಿಕೊಳ್ಳುತ್ತೀರಾ ಎಂದು ಪ್ರೀತಿಯಿಂದ ರವಿಚಂದ್ರನ್ ಅವರನ್ನು ಕೇಳಿದರಂತೆ. ಹಣ ನಿರೀಕ್ಷಿಸಿದ ಜ್ಯೋತಿಷಿಯ ಮಾತಿಗೆ ರವಿಚಂದ್ರನ್ ಒಪ್ಪಿದ್ದಾರೆ. ಎಲ್ಲರೂ ರವಿಚಂದ್ರನ್ ಎಂತಲೇ ಕರೆಯುವಾಗ ಈಗ ಯಾರು ರವಿಚಂದ್ರ ವಿ ಅಂತ ಕರೀತಾರೆ ಎಂದು ಕೂಡ ಕ್ರೇಜಿಸ್ಟಾರ್‌ಗೆ ಪ್ರಶ್ನೆ ಎದುರಾಗಿತ್ತಂತೆ.

 

 

“ಜ್ಯೋತಿಷಿಯೊಬ್ಬರು ನೀವು ನಿಮ್ಮ ಹೆಸರು ಬದಲಿಸಿಕೊಳ್ಳಿ. ರವಿಚಂದ್ರ ವಿ. ಎಂದು ಇಟ್ಟುಕೊಳ್ಳಿ. ಒಳ್ಳೆಯದಾಗುತ್ತದೆ ಎಂದಿದ್ದಾರೆ. ಅವರು ಅದನ್ನು ನನ್ನನ್ನು ಹೆದರಿಸಲೋ, ಆಸೆ ಹುಟ್ಟಿಸಲೋ ಹೇಳಿದ್ದಲ್ಲ. ನನ್ನ ಮೇಲಿನ ಪ್ರೀತಿ, ಗೌರವದಿಂದ, ನನಗೆ ಒಳ್ಳೆಯದಾಗಲಿ ಎಂದ ಆಸೆಯಿಂದ ಹೇಳಿದರು. ಅದಕ್ಕಾಗಿ ಹಣವನ್ನೂ ಕೇಳಲಿಲ್ಲ. ಅವರ ಪ್ರೀತಿಗೆ ನಾನು ಶರಣಾದೆ ” ಎಂದು ಸ್ವತಃ ರವಿಚಂದ್ರನ್ ಅವರೇ ಹೇಳಿಕೊಂಡಿದ್ದಾರೆ.

ಇನ್ನು ರವಿಚಂದ್ರನ್ ಅವರ ಮುಂದಿನ ಸಿನಿಮಾ ‘ದೃಶ್ಯ 2 ‘ ಚಿತ್ರದ ಟ್ರೈಲರ್ ನಿನ್ನೆ ರಾತ್ರಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ಟ್ರೈಲರ್ ಮತ್ತು ಪೋಸ್ಟರ್ನಲ್ಲಿ ಕೂಡ ರವಿಚಂದ್ರನ್ ಅವರ ಹೆಸರನ್ನು ರವಿಚಂದ್ರ ವಿ. ಎಂದು ಹಾಕಲಾಗಿದ್ದು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top