fbpx
ಕಿರುತೆರೆ

ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ರಾಜೀವನ ಪಾತ್ರಕ್ಕೆ ಬಂದ ಸಿನಿಮಾ ಹೀರೋ!

ಕನ್ನಡದ ಟಾಪ್ 5 ಧಾರಾವಾಹಿಗಳಲ್ಲಿ ‘ಮಂಗಳಗೌರಿ ಮದುವೆ’ ಕೂಡ ಒಂದು. ಗಗನ್ ಚಿನ್ನಪ್ಪ ಅವರು ಈ ಧಾರಾವಾಹಿಯಲ್ಲಿ ಪೊಲೀಸ್ ಅಧಿಕಾರಿ ರಾಜೀವ್ ಪಾತ್ರದಲ್ಲಿ ಗಗನ್ ನಟಿಸುತ್ತಿದ್ದರು. ಗಗನ್ ಧಾರಾವಾಹಿಯಿಂದ ಹೊರಬಿದ್ದಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಗಗನ್ ಚಿನ್ನಪ ಅವರು ನಾನು ಧಾರಾವಾಹಿಯಿಂದ ಹೊರನಡೆದಿರೋದು ಸತ್ಯ. ನನಗೆ ಒಂದು ಬದಲಾವಣೆ ಬೇಕಿತ್ತು. ಹೀಗಾಗಿ ಈ ನಿರ್ಧಾರ ಮಾಡಿದೆ. ಸದ್ಯ ಯಾವುದೇ ಧಾರಾವಾಹಿಯನ್ನು ಒಪ್ಪಿಕೊಂಡಿಲ್ಲ. ನನ್ನ ಬಳಿ ಈಗ ಮೂರು ಸಿನಿಮಾಗಳಿವೆ. ಅದರ ಕಡೆಗೆ ಗಮನ ಕೊಡಬೇಕಿದೆ. ಎಲ್ಲವೂ ಫೈನಲ್ ಆದನಂತರದಲ್ಲಿ ನಾನು ಹೆಚ್ಚಿನ ಮಾಹಿತಿ ನೀಡುವ ಎಂದು ಹೇಳಿದ್ದರು. ಅವರಿಗೆ ಸಿನಿಮಾ ಮಾಡಬೇಕು ಎನ್ನೋದು ಅನೇಕ ವರ್ಷಗಳ ಕನಸು. ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿಯೂ ಗಗನ್ ಚಿನ್ನಪ್ಪ ಭಾಗವಹಿಸಿ, ಉತ್ತಮ ಆಟ ಪ್ರದರ್ಶನ ಕೂಡ ತೋರಿಸಿದ್ದರು.

ಹಗೆಯೇ ಇವರಿಗೆ ಚಿಕ್ಕ ವಯಸ್ಸಿನಿಂದಲೂ ಕೃಷಿ ಮಾಡಬೇಕು ಎಂದು ಆಸೆ ಇವರು ಮೂಲತಃ ಕೊಡಗಿನವರಾದ ಗಗನ್ ಚಿನ್ನಪ್ಪ ತಂದೆಗೆ ಪಿತ್ರಾರ್ಜಿತ ಆಸ್ತಿ ಕೂಡ ಬಂದಿದೆ ಅದನ್ನು ನೋಡಿಕೊಂಡು ಕೃಷಿ ಮಾಡಬೇಕು ಎಂಬುದು ಗಗನ್ ಆಸೆ. ಆ ಕುರಿತು ಅವರು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು. ತಾವು ಹುಟ್ಟಿದಾಗ ತಮ್ಮ ಮನೆಯಲ್ಲಿ ಅಪ್ಪ-ಅಮ್ಮನಿಗೆ ತಿನ್ನೋಕೆ ಅನ್ನ ಕೂಡ ಇರಲಿಲ್ಲ ತಮಗೆ ಇಂಗ್ಲಿಷ್ ಬರುತ್ತಿರಲಿಲ್ಲ ಎಂದು ಕೂಡ ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಗಗನ್ ಚಿನ್ನಪ್ಪ ಫೋಟೋ ನೋಡಿ ಅವರಿಗೆ ‘ಮಂಗಳಗೌರಿ’ ಧಾರಾವಾಹಿಯಲ್ಲಿ ನಟಿಸುವ ಆಫರ್ ಸಿಕ್ಕಿತ್ತು. ಆದರೆ ಈಗ ಒಟ್ಟಿನಲ್ಲಿ ಗಗನ್ ಅರಸಿ ಸಿನಿಮಾಗೆ ಅವಕಾಶಗಳು ಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top