fbpx
ಸಮಾಚಾರ

ಕೊರೋನಾ ಸೋಂಕಿತರಿಗಿಂತ ಲಸಿಕೆ ಪಡೆದವರೇ ಹೆಚ್ಚು.

ಒಮಿಕ್ರೋನ್‌ ಬಗ್ಗೆ ಗಾಬರಿ ಬೇಡ ಇದು ಮಾರಣಾಂತಿಕವಲ್ಲ ಎಂದು ತಜ್ಞರು ಹೇಳಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 1ರಿಂದ 20 ದಿನಗಳಲ್ಲಿ ದೃಢಪಟ್ಟಿರುವ ಒಟ್ಟು ಕೊರೋನಾ ಸೋಂಕಿತರಲ್ಲಿ ಶೇ.72ರಷ್ಟು ಮಂದಿ ಲಸಿಕೆ ಪಡೆದವರಿಗೇ ಸೋಂಕು ಉಂಟಾಗಿದೆ. ಆದರೆ ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ತೀರಾ ಕಡಿಮೆ ಇರುವುದು ದೃಢಪಟ್ಟಿದೆ. ಹೀಗಾಗಿ ಲಸಿಕೆ ಬಗ್ಗೆ ನಿರ್ಲಕ್ಷ್ಯ ಮಾಡದೆ ಕೂಡಲೇ ಲಸಿಕೆ ಪಡೆಯುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನ.1ರಿಂದ 20ರವರೆಗೆ 20 ದಿನಗಳಲ್ಲಿ 2,953 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಟ್ರಯಾಜಿಂಗ್‌ ಕೇಂದ್ರಗಳಲ್ಲಿ 1,538 ಮಂದಿಯನ್ನು ಪರಿಶೀಲನೆ ನಡೆಸಿದ್ದು, 1,254 ಮಂದಿಗೆ ಲಸಿಕೆ ಪಡೆದಿದ್ದರೂ ಸೋಂಕು ಉಂಟಾಗಿದೆ. ಈ ಪೈಕಿ ಶೇ.90ರಷ್ಟು ಮಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ.

ಇನ್ನು ವರ್ಷಾರಂಭದಲ್ಲೇ ಮೊದಲ ಡೋಸ್‌ ಲಸಿಕೆ ಪಡೆದು ಜೂನ್‌ ಒಳಗಾಗಿ ಎರಡೂ ಡೋಸ್‌ ಪಡೆದಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ಲಸಿಕೆ ನೀಡುವ ಅವಶ್ಯಕತೆ ಇದೆ. ಕೇಂದ್ರ ಸಮ್ಮತಿಸಿದರೆ ಮುಂದಿನ ವಾರದಿಂದಲೇ ಲಸಿಕೆ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಹೊಸ ತಳಿಯ ಸೋಂಕು ಲಸಿಕೆ ಪಡೆದವರಿಗೂ ಕಾಡುತ್ತಿದೆ. ಹೀಗಾಗಿ ಕೊರೋನಾ ಜೀವಂತವಾಗಿದ್ದು, ರೂಪಾಂತರಗೊಳ್ಳುತ್ತಿದೆ. ಲಸಿಕೆಯ ಪ್ರಭಾವವನ್ನು ಕುಗ್ಗಿಸಲು ನಿರಂತರವಾಗಿ ಬದಲಾಗುತ್ತಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ಕೊರೋನಾ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ. ಮಾಸ್ಕ್‌, ಸಾಮಾಜಿಕ ಅಂತರದಂತಹ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಜ್ಯದ ಜಿನೋಮ್‌ ಸೀಕ್ವೆನ್ಸಿಂಗ್‌ ಸಮಿತಿ ಮುಖ್ಯಸ್ಥ ಡಾ. ವಿಶಾಲ್‌ರಾವ್‌ ಸಲಹೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top