fbpx
ಸಮಾಚಾರ

ನವೆಂಬರ್ 30: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 30, 2021 ಮಂಗಳವಾರ
ವರ್ಷ : 1943 ಪ್ಲಾವ
ತಿಂಗಳು : ಕಾರ್ತೀಕ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಏಕಾದಶೀ 2:13 am
ನಕ್ಷತ್ರ : ಹಸ್ತ 8:34 pm
ಯೋಗ : ಆಯುಷ್ಮಾನ್ 12:03 am
ಕರಣ : ಬಾವ 3:18 pm ಬಾಲವ 2:13 am

Time to be Avoided
ರಾಹುಕಾಲ : 2:57 pm – 4:22 pm
ಯಮಗಂಡ : 9:18 am – 10:43 am
ದುರ್ಮುಹುರ್ತ : 8:44 am – 9:30 am, 10:52 pm – 11:43 pm
ವಿಷ : 3:58 am – 5:27 am
ಗುಳಿಕ : 12:08 pm – 1:33 pm

Good Time to be Used
ಅಮೃತಕಾಲ : 2:51 pm – 4:22 pm
ಅಭಿಜಿತ್ : 11:45 am – 12:30 pm

Other Data
ಸೂರ್ಯೋದಯ : 6:25 am
ಸುರ್ಯಾಸ್ತಮಯ : 5:51 pm
ರವಿರಾಶಿ : ವೃಶ್ಚಿಕ
ಚಂದ್ರರಾಶಿ : ಕನ್ಯ

 

 

 

 

ಕೋಪದ ಬಡಿದೆಬ್ಬಿಸುವಿಕೆ ವಾದ ಮತ್ತು ಘರ್ಷಣೆಗೆ ಕಾರಣವಾಗಬಹುದು. ಯೋಜಿತವಲ್ಲದ ಮೂಲಗಳಿಂದ ಹಣದ ಲಾಭ ನಿಮ್ಮ ದಿನವನ್ನು ಬೆಳಗಿಸುತ್ತದೆ. ಈಗ ತಾನೇ ಪರಿಚಯವಾದವರ ಜೊತೆ ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ.

 

ನಿಮ್ಮ ಶೀಘ್ರ ಕ್ರಮ ನಿಮ್ಮನ್ನು ಪ್ರೇರೇಪಿಸುತ್ತದೆ. ಯಶಸ್ಸು ಸಾಧಿಸಲು-ಸಮಯದ ಜೊತೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ-ಇದು ನಿಮ್ಮ ದೃಷ್ಟಿಯನ್ನು ವಿಸ್ತಾರಗೊಳಿಸುತ್ತದೆ ನಿಮ್ಮ ವ್ಯಕ್ತಿತ್ವವನ್ನು ವೃದ್ಧಿಸುತ್ತದೆ- ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಮನಸ್ಸನ್ನು ಪಕ್ವಗೊಳಿಸುತ್ತದೆ.

 

ಮಾನಸಿಕ ಶಾಂತಿಗಾಗಿ ಕೆಲವು ದಾನ ಧರ್ಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ವೆಚ್ಚಗಳ ಮೇಲೆ ಮಿತಿ ಹೇರಿ. ಪತ್ನಿಯೊಂದಿಗೆ ಜಗಳ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅನವಶ್ಯಕ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ಜೀವನದಲ್ಲಿ ಮಹತ್ವದ ವಿಷಯವೆಂದರೆ ನಾವು ಮಾರ್ಪಡಿಸಲು ಸಾಧ್ಯವಿಲ್ಲದ ವಿಷಯಗಳನ್ನು ಒಪ್ಪಿಕೊಳ್ಳಲು ಕಲಿಯುವುದಾಗಿದೆ.

 

ಗಾಳಿಯಲ್ಲಿ ಮನೆ ಕಟ್ಟುವುದು ನಿಮಗೆ ಸಹಾಯ ಮಾಡಲಾರದು. ನೀವು ಕುಟುಂಬದ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಏನಾದರೂ ಮಾಡಬೇಕು. ಆಶೀರ್ವಾದ ಹಾಗೂ ಅದೃಷ್ಟ ನಿಮ್ಮ ಬಳಿ ಬರುತ್ತಿದ್ದ ಹಾಗೆ ನಿಮ್ಮ ಬಯಕೆಗಳು ಪೂರೈಸಲ್ಪಡುತ್ತವೆ – ಮತ್ತು ಹಿಂದಿನ ದಿನಗಳ ಶ್ರಮ ಈಗ ಫಲ ನೀಡುತ್ತದೆ.

 

 

ಬಂಧು-ಬಾಂಧವರ ಹಾಗೂ ಸ್ನೇಹಿತರ ಸಹಾಯ ಮತ್ತು ಸಹಕಾರವು ನಿಮಗೆ ದೊರೆಯುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ವಿವಿಧ ಮೂಲಗಳಿಂದ ಹಣ ಬರುವುದು.

 

 

ಕೆಲಸದ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನಿಷ್ಠುರತೆಯನ್ನು ತೋರದಿದ್ದಲ್ಲಿ ಮಹತ್ತರ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ.

 

 

ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ನಿಮಗೆ ಗೌರವ ಆದರಗಳು ದೊರೆಯುವುದು. ಈ ವಿಚಾರವು ನಿಮ್ಮ ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವುದು. ಜಯವಿರುವವರೆಗೂ ಭಯವಿಲ್ಲ. ಹಾಗಾಗಿ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

 

 

ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಆ ಧೈರ್ಯವೇ ನಿಮ್ಮ ಬಹುದೊಡ್ಡ ಆಸ್ತಿ. ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಗಸು ಎನ್ನುವಂತೆ ಹಳೆಯ ವಿಚಾರಗಳು ನಿಮಗೆ ಮುದವನ್ನುಂಟು ಮಾಡುವುದು.

ಬೆನ್ನು ನೋವು ಅಥವಾ ಮಂಡಿನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಾಲು ಕೆಜಿಯಷ್ಟು ತೊಗರಿಬೇಳೆಯನ್ನು ದಾನ ಮಾಡಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ. ಸಂಗಾತಿಯ ಮಾತುಗಳಿಗೆ ಬೆಲೆ ಕೊಡುವುದು ಒಳ್ಳೆಯದು.

 

 

ನಿಮ್ಮ ಮಾತಿಗೂ ಕೃತಿಗೂ ಅಂತರವಿರದಿರಲಿ. ಕೆಲ ಗ್ರಹಗಳ ಸಂಚಾರದಿಂದ ನಿಮಗೆ ಅಧಿಕ ಒತ್ತಡ ಉಂಟಾಗುವುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ಕುಲದೇವತಾ ಪ್ರಾರ್ಥನೆ ಮಾಡಿ.

 

ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು. ಅಂಜಿಕೆ, ಅಧೈರ್ಯ ಬದಿಗಿಟ್ಟು ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ.

 

ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯ‌ವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top