fbpx
ಸಮಾಚಾರ

’83’ ಸಿನಿಮಾದ ಟ್ರೇಲರ್‌ ಕನ್ನಡ ಟ್ರೈಲರ್ ಬಿಡುಗಡೆ: ಕನ್ನಡ ವರ್ಷನ್ ‘ಸೂಪರ್’ ಎಂದ ಪ್ರೇಕ್ಷಕ

ಭಾರತೀಯ ಕ್ರಿಕೆಟ್ ನ ಅತ್ಯಂತ ಶ್ರೇಷ್ಠ ವಿಜಯ ಎಂದೇ ಬಣ್ಣಿಸಲಾಗುವ 1983 ವಿಶ್ವಕಪ್ ಕುರಿತಾಗಿ ಮಾಡಿರುವ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ‘83’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಹಲವು ತಿಂಗಳಿಂದ ಕಾಯುತ್ತಿದ್ದರು. ರಣವೀರ್​ ಸಿಂಗ್​ ನಟನೆಯ ಈ ಚಿತ್ರ ಡಿ.24ರಂದು ತೆರೆ ಕಾಣಲಿದೆ. ಈ ಮಧ್ಯೆ ಚಿತ್ರದ ಕನ್ನಡ ವರ್ಷನ್ ಟ್ರೈಲರ್ ಲಾಂಚ್ ಮಾಡಲಾಗಿದ್ದು ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.

 

 

ಕಪಿಲ್ ದೇವ್ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಕಾಣಿಸಿಕೊಂಡಿದ್ದು, ಟ್ರೇಲರ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದವರ ಜರ್ನಿ, ಅವರ ಹೋರಾಟ, ಗೆಲುವುಗಳು ಮತ್ತು ಸೋಲುಗಳನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಟ್ರೇಲರ್‌ನಲ್ಲಿ ಕಪಿಲ್ ದೇವ್ ಅವರ ಪತ್ನಿ ಪಾತ್ರದಲ್ಲಿ ರಣ್‍ವೀರ್ ​ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಕನ್ನಡ ಅವತರಿಣಿಕೆಯಲ್ಲಿ ಆಯಾ ಪಾತ್ರಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಧ್ವನಿಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದು ಕ್ವಾಲಿಟಿ ಮಾತ್ರ ಸಕ್ಕತ್ತಾಗಿದೆ ಎಂದು ಸಿನಿ ಪ್ರೇಮಿಗಳು ಹೇಳುತ್ತಿದ್ದಾರೆ.

ಕನ್ನಡ ಆವೃತ್ತಿಯ ಟ್ರೈಲರ್ ಅನ್ನು ಖ್ಯಾತ ನಟ ಕಿಚ್ಚ ಸುದೀಪ್ ಅವರು ಲಾಂಚ್ ಮಾಡಿದ್ದು ಕನ್ನಡ ಪ್ರೇಕ್ಷಕರು ಕೂಡ ಡಬ್ಬಿಂಗ್ ಕ್ವಾಲಿಟಿಗೆ ಸೆಲ್ಯೂಟ್ ಹೊಡೆದಿದ್ದಾರೆ., ಅಸಾಧ್ಯವಾಗದ್ದನ್ನು ಸಾಧ್ಯವಾಗಿಸಿದವರ ನೈಜ ಕಥೆಯ ಟ್ರೇಲರ್‌ ರಿಲೀಸ್ ಆಗಿದೆ. ಇದೇ ಡಿಸೆಂಬರ್ 24ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 3ಡಿಯಲ್ಲಿಯು ನೋಡಬಹುದು ಎಂದು ಸುದೀಪ್ ಅವರು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top