fbpx
ಸಮಾಚಾರ

ಅಪ್ಪು ಸಮಾಧಿಗೆ ಓಡಿ ಓಡಿ ಧಾರವಾಡದಿಂದ ಬರುತ್ತಿರುವ ಮಹಿಳೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ ನಿಧನರಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನೂ ಕೂಡ ಎಲ್ಲರ ಮನದಲ್ಲಿ ಅವರನ್ನು ಕಳೆದುಕೊಂಡ ನೋವು ಕೊಂಚವೂ ಕಡಿಮೆಯಾಗಿಲ್ಲ. ಅವರ ಸಮಾಜ ಸೇವಾ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾ ಅವರ ಅಭಿಮಾನಿಗಳು ತಾವು ಕೂಡ ಅಂಥದ್ದೇ ಕೆಲಸ ಮಾಡುತ್ತಿದ್ದಾರೆ.

ಧಾರವಾಡದ ಮನಗುಂಡಿ ಗ್ರಾಮದ ಕುಟುಂಬವೊಂದು ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದು ಅವರನ್ನು ಕಣ್ಣಾರೆ ನೋಡಬೇಕೆಂದುಕೊಂಡಿತ್ತು. ಆದರೆ ಅದು ಕೊನೆಯವರೆಗೂ ಸಾಧ್ಯವಾಗಿರಲೇ ಇಲ್ಲ. ಉಮೇಶ ಪಾಟೀಲ್ ಕುಟುಂಬದವರಿಗೆ ಅಪ್ಪು ಅಂದರೆ ಪಂಚಪ್ರಾಣ. ಅವರ ಪತ್ನಿ ದಾಕ್ಷಾಯಿಣಿ ಪಾಟೀಲ್ ಅವರಿಗಂತೂ ಅಪ್ಪು ಅಂದರೆ ದೇವರ ಸಮಾನ. ಅಷ್ಟಕ್ಕೂ ಅಪ್ಪುನನ್ನು ದಾಕ್ಷಾಯಿಣಿ ಇಷ್ಟ ಪಡೋದಕ್ಕೆ ಕಾರಣ ಅಪ್ಪು ಫಿಟ್ ಅಂಡ್ ಫೈನ್ ಆಗಿದ್ದು. ತಮ್ಮ ಮನಗುಂಡಿ ಗ್ರಾಮದಿಂದ ಬೆಂಗಳೂರಿನಲ್ಲಿನ ಪುನಿತ್ ಸಮಾಧಿವರೆಗೆ ಓಡುತ್ತಲೇ ಹೋಗಲಿರೋ ದಾಕ್ಷಾಯಿಣಿ ಆ ಮೂಲಕ ತನ್ನ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಇದೀಗ ಓಟವನ್ನು ಆರಂಭಿಸಿರೋ ದಾಕ್ಷಾಯಿಣಿ ಒಟ್ಟು 13 ದಿನಗಳಲ್ಲಿ ಬೆಂಗಳೂರು ತಲುಪಲಿದ್ದಾರೆ.

ದಾರಿ ಮಧ್ಯೆ ಎಲ್ಲಿ ಅನುಕೂಲ ಸಿಗುತ್ತದೆಯೋ ಅಲ್ಲಿಯೇ ಉಳಿದುಕೊಂಡು ಮತ್ತೆ ಹಗಲು ಹೊತ್ತಿನಲ್ಲಿ ಪ್ರಯಾಣ ಶುರು ಮಾಡಲಾಗುತ್ತದೆ. ಇನ್ನು ವಾಹನದಲ್ಲಿ ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಿ ಮತ್ತೆ ಪ್ರಯಾಣ ಮುಂದುವರೆಸಲಿರುವ ದಾಕ್ಷಾಯಿಣಿ 13 ದಿನಕ್ಕೆ ಬೆಂಗಳೂರು ತಲುಪಲಿದ್ದಾರೆ. ಈ ವೇಳೆ ಅಪ್ಪು ಕುಟುಂಬಸ್ಥರನ್ನು ಭೇಟಿಯಾಗೋ ಇಚ್ಛೆ ಕೂಡ ಈ ಕುಟುಂಬಕ್ಕೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top