fbpx
ಸಿನಿಮಾ

ಗೋಲ್ಡನ್ ಗ್ಯಾಂಗ್’ ಜೊತೆ ಕಿರುತೆರೆಗೆ ಗ್ರ್ಯಾಂಡ್‌ ಎಂಟ್ರಿ ನೀಡಿದ ‘ಗೋಲ್ಡನ್ ಸ್ಟಾರ್’ ಗಣೇಶ್‌.

ಗೋಲ್ಡನ್ ಸ್ಟಾರ್ ಗಣೇಶ್ ಕಾಮಿಡಿ ಮಾಡುವುದರಲ್ಲಿ ಎತ್ತಿದ ಕೈ. ಇವರ ಕಾಮಿಡಿ ಟೈಮಿಂಗ್‌ಗೆ ಸಖತ್ತಾಗಿದೆ. ಇತ್ತೀಚೆಗೆ ರಿಲೀಸ್ ಆಗಿರುವ ‘ಸಖತ್’ ಸಿನಿಮಾ ನೋಡಿದವರೂ ಕೂಡ ಗಣೇಶ್ ಕಾಮಿಡಿ ಟೈಮಿಂಗ್‌ಗೆ ಫುಲ್ ಫಿದಾ ಆಗಿದ್ದಾರೆ. ಈ ಮಧ್ಯೆ ಗೋಲ್ಡನ್ ಸ್ಟಾರ್ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿಯೊಂದಿದೆ. ಸಿನಿಮಾ ಜೊತೆ ಜೊತೆಗೆ ರಿಯಾಲಿಟಿ ಶೋಗೆ ಮತ್ತೆ ಮರಳಿರುವ ಗಣೇಶ್ ಒಂದೇ ಪ್ರೋಮೊದಿಂದ ಕಿಕ್ ಕೊಡುತ್ತಿದ್ದಾರೆ.

‘ಗೋಲ್ಡನ್ ಗ್ಯಾಂಗ್’ ಒಂದು ಅಪರೂಪದ ಕಾರ್ಯಕ್ರಮ. ಇದು ತುಂಬ ಥ್ರಿಲ್ಲಿಂಗ್​ ಆಗಿರಲಿದ್ದು ಕನ್ನಡ ಸಿನಿಮಾ ಮತ್ತು ಕಿರುತೆರೆ ಲೋಕದ ಹಲವು ಕಲಾವಿದರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಗೆಬಗೆಯ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಿರುವ ಜೀ ಕನ್ನಡ ವಾಹಿನಿ ಟಿಆರ್​ಪಿ ವಿಚಾರದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದೆ. ‘ಗೋಲ್ಡನ್​ ಗ್ಯಾಂಗ್​’ ಶೋ ಮೂಲಕ ವಾಹಿನಿಯ ಮೆರುಗು ಹೆಚ್ಚುವ ನಿರೀಕ್ಷೆ ಇದೆ.

ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಗಣೇಶ್​ ಅವರು ವೃತ್ತಿ ಜೀವನ ಆರಂಭಿಸಿದ್ದೇ ಕಿರುತೆರೆ ಮೂಲಕ. ಮನರಂಜನಾ ವಾಹಿನಿಯಲ್ಲಿ ನಿರೂಪಕರಾಗಿದ್ದ ಅವರು ಆ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದರು. ಈಗಲೂ ಅವರು ನಿರೂಪಣೆಯಲ್ಲಿ ಆಸಕ್ತಿ ಹೊಂದಿದ್ದಾರೆ. ‘ಗೋಲ್ಡನ್​ ಗ್ಯಾಂಗ್​’ ಶೋ ಮೂಲಕ ಮತ್ತೆ ನಿರೂಪಕನ ಸ್ಥಾನಕ್ಕೆ ಅವರು ಬಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top