fbpx
ಸಮಾಚಾರ

ಅಭಿಮಾನಿಗಳಿಗೆ ಗುಡ್​ ನ್ಯೂಸ್​; ‘83’ ಚಿತ್ರತಂಡದ ಜತೆ ಸೇರಿಕೊಂಡ ಕಿಚ್ಚ ಸುದೀಪ್​.

ಭಾರತೀಯ ಕ್ರಿಕೆಟ್ ನ ಅತ್ಯಂತ ಶ್ರೇಷ್ಠ ವಿಜಯ ಎಂದೇ ಬಣ್ಣಿಸಲಾಗುವ 1983 ವಿಶ್ವಕಪ್ ಕುರಿತಾಗಿ ಮಾಡಿರುವ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ‘83’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಹಲವು ತಿಂಗಳಿಂದ ಕಾಯುತ್ತಿದ್ದರು. ರಣವೀರ್​ ಸಿಂಗ್​ ನಟನೆಯ ಈ ಚಿತ್ರ ಡಿ.24ರಂದು ತೆರೆ ಕಾಣಲಿದೆ.

ಈ ಮಧ್ಯೆ ಹಾಗಂತ ಅವರೇನು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಭಾವಿಸಬೇಡಿ ಯಾಕೆಂದರೆ ಅವರು ಚಿತ್ರದಲ್ಲಿ ನಟನೆ ಮಾಡುತ್ತಿಲ್ಲ ಬದಲಾಗಿ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಸುದೀಪ್ ಅವರು ಕನ್ನಡ ಅವತರಣಿಕೆ 83 ಚಿತ್ರದ ಚಿತ್ರವನ್ನು ಕರ್ನಾಟಕದಲ್ಲಿ ಪ್ರಸ್ತುತಪಡಿಸಲಿದ್ದಾರೆ.

ಸುದೀಪ್​ ಅವರು ಬಹಳ ಖುಷಿಯಿಂದ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ‘ಕನ್ನಡದಲ್ಲಿ ತೆರೆ ಕಾಣುತ್ತಿರುವ ‘83’ ಸಿನಿಮಾವನ್ನು ಅರ್ಪಿಸಲು ನನಗೆ ಸಂತೋಷ ಆಗುತ್ತದೆ. ಕ್ರಿಕೆಟ್ ಎಂಬುದು ಭಾರತಿಯರಿಗೆ ಒಂದು ಧರ್ಮವೇ ಆಗಿ ಹೋಗಿರುವಾಗ ಈ ನೈಜ ಕಥೆಯನ್ನು ತೆರೆಯ ಮೇಲೆ ತಂದಿರುವುದಕ್ಕೆ ಅಭಿನಂದನೆಗಳು. ಇದು ನಿಜಕ್ಕೂ ಬಹು ನಿರೀಕ್ಷೆಯ ಸಿನಿಮಾ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಸಿನಿಮಾ ಇತರೆ ಭಾಷೆಗಳಿಗೆ ಡಬ್​ ಆಗಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತೆಲುಗಿನಲ್ಲಿ ‘83’ ರಿಲೀಸ್​ ಆಗಲಿದೆ. ಕನ್ನಡ ಅವತರಣಿಕೆಯನ್ನು ಸುದೀಪ್​ ಬಿಡುಗಡೆ ಮಾಡುತ್ತಿದ್ದಾರೆ. ಆ ಕಾರಣದಿಂದಲೂ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಕಿಚ್ಚ ಸುದೀಪ್ ಅವರು ನಮ್ಮ ತಂಡದೊಂದಿಗೆ ಸೇರಿಕೊಂಡಿರುವುದರಿಂದ ‘83’ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗಲಿದೆ’ ಎಂದು ಕಬೀರ್ ಖಾನ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top